

ಮಂಡ್ಯ: ಬಡ್ತಿ, ಸೇವಾ ಹಿರಿತನದ ಆಧಾರದ ಮೇಲೆ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಮತ್ತು ನೌಕರರ ಎಲ್ಲ ವೃಂದ ಸಂಘ, ಗ್ರಾಪಂ ಸದಸ್ಯರ ಒಕ್ಕೂಟದಿಂದ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಯಿತು.
ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತಿರುವ ಅಧಿಕಾರಿ, ನೌಕರರು ಹಾಗೂ ಗ್ರಾಪಂ ಸದಸ್ಯರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಅಂತೆಯೇ ಧರಣಿಗೆ ಬಿಜೆಪಿ ಬೆಂಬಲ ನೀಡಿತು. ಪಿಡಿಒ, ಕರವಸೂಲಿಗಾರರು, ಕ್ಲಕ್, ಡೇಟಾ ಎಂಟ್ರಿ ಆಪರೇಟರ್, ನೀರು ಘಂಟಿ, ಜವಾನರು, ಸ್ವಚ್ಛತಾಗಾರರು, ಗ್ರೇಡ್-1 ಕಾರ್ಯದರ್ಶಿ ಮತ್ತು ಗ್ರೇಡ್-2 ಕಾರ್ಯದರ್ಶಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕರರು, ಪತ್ರಾಂಕಿತ ಅಧಿಕಾರಿಗಳು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿವಿಧ ನೌಕರರ ಸಂಘದ ಶಂಭುಗೌಡ, ಟಿ.ಎ.ಪ್ರಶಾಂತ್‌ಬಾಬು, ಸದಸ್ಯರ ಒಕ್ಕೂಟದ ನಾಗೇಶ್, ಮಹೇಶ್, ಪ್ರದೀಪ್ ಸಿದ್ದೇಗೌಡ, ಸುವರ್ಣಾವತಿ ಇತರರಿದ್ದರು.