

ಉಡುಪಿ: ಎಲ್ಲ ಗ್ರಾ ಪಂ. ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ. ಹುದ್ದೆಗೆ ಉನ್ನತಿಕರಿಸಬೇಕು. ಪೊಲೀಸ್ ಇಲಾಖೆ ಮಾದರಿಯಲ್ಲಿ ಕುಂದುಕೊರತೆ ಪ್ರಾಧಿಕಾರ ರಚಿಸಬೇಕು. ಕಾರ್ಯದರ್ಶಿಗಳಿಗೆ ಕಾಲಮಿತಿಯೊಳಗೆ ಪಿಡಿಒ ಹುದ್ದೆಗೆ ಬಡ್ತಿ ನೀಡುವುದು ಸಹಿತ ವಿವಿಧ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಗ್ರಾಮೀಣ ಜನರ ಸೇವೆ ಮಾಡುವ ಗ್ರಾ ಪಂ. ನೌಕರರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಅರ್ನಿದಿಷ್ಟಾವಧಿವರೆಗೆ ಮುಷ್ಕರ ಮುಂದುವರಿಸುವುದಾಗಿ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಪಿ. ಶೆಟ್ಟಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಂಘಗಳು ಹಾಗೂ ಗ್ರಾ.ಪಂ. ನೌಕರರ ಒಕ್ಕೂಟ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕ್ಲರ್ಕ್, ಡಾಟ ಎಂಟ್ರಿ ಆಪರೇಟರ್, ನೀರಘಂಟಿ, ಸ್ವಚ್ಛತಾ ನೌಕರರಿಗೆ ಸಂಬಂಧಿಸಿ ವೇತನ ಶ್ರೇಣಿ ಜಾರಿಗೊಳಿಸಬೇಕು. ಇಎಸ್ಐ, ಪಿಎಫ್ ವ್ಯವಸ್ಥೆ ಮಾಡಬೇಕು. ವೈದ್ಯಕಿಯ ವೆಚ್ಚ 5 ಲಕ್ಷ ರೂ. ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪಂಚಾಯತ್ರಾಜ್ ಇಲಾಖೆ ವೃಂದ ಸಂಘ ಪದಾಧಿಕಾರಿಗಳಾದ ಅನಿಲ್ ಶೆಟ್ಟಿ, ಸಂತೋಷ್ ಜೋಗಿ, ಚಂದ್ರ ಬಿಲ್ಲವ, ತಿಲಕ್ರಾಜ್, ಗುರುಮೂರ್ತಿ, ರವೀಂದ್ರ ರಾವ್, ಆಶಾಲತಾ, ವಸಂತಿ, ರಮೇಶ್ ಕೆ. ನಾಯ್ಕ, ರುಕ್ಕನ ಗೌಡ, ಶಿವರಾಜು, ನಾಗೇಶ್ ಬಿ., ದಯಾನಂದ ಬೆನ್ನೂರು, ಪ್ರವಿಣ್ ಡಿಸೋಜಾ, ಹರೀಶ್ಚಂದ್ರ ಆಚಾರ್ಯ, ಪ್ರಶಾಂತ್, ನಾರಾಯಣ ಬೀಜಾಡಿ, ಮಹೇಶ್ ಕೆ. ಸತೀಶ್ ಮೊದಲಾದವರು ಉಪಸ್ಥಿತರಿದ್ದರು.