೯ರಂದು ವಿಟ್ಲ ಸಹಕಾರಿ ಬ್ಯಾಂಕ್ ಚುನಾವಣೆ

Published on

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ.) ವಿಟ್ಲದಲ್ಲ್ಲಿ ಮಾ.೯ರಂದು ೯ರಿಂದ ಸಂಜೆ ೪ರ ತನಕ ನಡೆಯಲಿದೆ.

ಪರಿಶಿಷ್ಟ ಜಾತಿ -೧, ಪರಿಶಿಷ್ಟ ಪಂಗಡ-೧, ಹಿಂದುಳಿದ ವರ್ಗ ಪ್ರವರ್ಗ ಎ-೧ ಹಾಗೂ ಬಿ-೧ ಮತ್ತು ಮಹಿಳಾ ಮೀಸಲು - ೨ ಸೇರಿ ಒಟ್ಟು ೬ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ೯ ಸಾಮಾನ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ. ಅರ್ಹ ಮತದಾರರು ಬ್ಯಾಂಕಿನ ಗುರುತಿನ ಚೀಟಿಯೊಂದಿಗೆ ಬಂದು ಮತದಾನದಲ್ಲಿ ಭಾಗವಹಿಸಬೇಕೆಂದು ರಿಟರ್ನಿಂಗ್ ಅಽಕಾರಿ ಶಿವಲಿಂಗಯ್ಯ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net