೨೫ರಂದು ಗ್ರಾಮೀಣ ಸಹಕಾರಿ ಬ್ಯಾಂಕ್ ಕಟ್ಟಡ ಉದ್ಘಾಟನೆ

Published on

ವಿಟ್ಲ: ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದ ನೂತನ ಕಟ್ಟಡ ಸಮೃದ್ಧಿಯ ಉದ್ಘಾಟನೆ ಹಾಗೂ ಕಲ್ಲಡ್ಕ ಶಾಖೆಯ ಸ್ಥಳಾಂತರ ಕಾರ್ಯಕ್ರಮ ನ.೨೫ರಂದು ಬೆಳಗ್ಗೆ ೧೨ಕ್ಕೆ ಕಲ್ಲಡ್ಕದಲ್ಲಿ ನಡೆಯಲಿದೆ.

ನೂತನ ಕಟ್ಟಡವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಲಿದ್ದು, ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ಶಾಖಾ ಕಚೇರಿ, ರಾಜೇಶ್ ನಾಕ್ ಉಳುಪ್ಪಾಡಿಗುತ್ತು ಭದ್ರತಾಕೊಠಡಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಕಟ್ಟಡ ಹೆಸರು ಅನಾವರಣ, ಮಾಜಿ ಸಚಿವ ಬಿ. ರಮಾನಾಥ ರೈ ಶಾಖೆಯ ಗಣಕೀಕರಣ ವ್ಯವಸ್ಥೆ ಉದ್ಘಾಟಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಎನ್. ದೀಪ ಪ್ರಜ್ವಲಿಸುವರು.

ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ್ಯ ಪೂಜಾರಿ, ಕ್ಯಾಂಪ್ಕೊ ನಿರ್ದೇಶಕ ಎಸ್. ಆರ್. ಸತೀಶ್ಚಂದ್ರ, ಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಕೆ. ಅಣ್ಣು ಪೂಜಾರಿ, ಗೋಳ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಪುರುಷೋತ್ತಮ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net