ಗ್ರಾಮೀಣ ಕಲೆಗಳ ಅರಿವು ಮೂಡಿಸಿ

21 KAMPLI 02
ಸುಗ್ಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಛದ್ಮವೇಷ ಧರಿಸಿ ಗಮನ ಸೆಳೆದರು. ಪ್ರಮುಖರಾದ ಕೆ.ಉಮಾದೇವಿ, ಭೂಮೇಶ್ವರ, ಸುಲೋಚನಾ, ರವಿಕುಮಾರ್ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ತಾಪಂ ಮಾಜಿ ಅಧ್ಯಕ್ಷೆ ಕೆ.ಉಮಾದೇವಿ ಮಾತನಾಡಿ, ಮಕ್ಕಳಲ್ಲಿ ರಂಗಕಲೆ, ಗ್ರಾಮೀಣ ಕಲೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಶಿಕ್ಷಕರು ಮುಂದಾಗಬೇಕಿದೆ ಎಂದರು.

ಕ್ಲಸ್ಟರ್‌ನ 11 ಶಾಲೆಗಳ ಮಕ್ಕಳು ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಮುಖ್ಯಶಿಕ್ಷಕಿ ಸುಲೋಚನಾ, ಸಿಆರ್‌ಪಿ ಭೂಮೇಶ್ವರ್, ಮುಖ್ಯಶಿಕ್ಷಕರಾದ ರವಿಕುಮಾರ್, ವೀರೇಶ, ಧನಲಕ್ಷ್ಮೀ, ಗೋಣಿ ಬಸಪ್ಪ, ನಾಗರಾಜ, ದೇವರಾಜ, ದೊಡ್ಡಬಸಪ್ಪ, ಶ್ವೇತಾ ಇತರರಿದ್ದರು.

ಜವುಕು ಗ್ರಾಮದ ಸಹಿಪ್ರಾ ಶಾಲಾವರಣದಲ್ಲಿ ಮೆಟ್ರಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ನಡೆಯಿತು.
ಸಿಆರ್‌ಪಿ ಎಚ್.ದೊಡ್ಡಬಸಪ್ಪ ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳ ಕಲೆಗಳ ಪ್ರದರ್ಶನದ ಹಬ್ಬವಾಗಿದೆ.

ಮಕ್ಕಳಲ್ಲಿನ ಆಸಕ್ತಿಯುತ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭಾನ್ವಿತರನ್ನಾಗಿ ರೂಪಿಸಬೇಕಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಪಕ್ಕೀರಪ್ಪ, ಮುಖ್ಯಶಿಕ್ಷಕರಾದ ಚಂದ್ರಶೇಖರ ಹೊಸಕೋಟೆ, ರಾಮಚಂದ್ರಪ್ಪ,

ಪ್ರಮುಖರಾದ ಎನ್.ಮಲ್ಲಿಕಾರ್ಜುನ, ಕೆ.ಶಿವಕುಮಾರ್, ಎನ್.ಈರಣ್ಣ, ಜಡೆಪ್ಪ, ಪ್ರತಾಪ್, ಹೊಸಕೋಟೆ ಜಗದೀಶ, ಎಂ.ಎ.ನಾಗನಗೌಡ, ಹನುಮಂತಪ್ಪ, ಟಿ.ಎಂ.ಬಸವರಾಜ, ಎಂ.ರೇವಣ್ಣ, ಸುನಿತಾಪೂಜಾರಿ, ಎಚ್.ಜಡೆಪ್ಪ, ಜೋಗಿ ರುದ್ರಪ್ಪನಾಯಕ, ರೇವಣಸಿದ್ದೇಶ, ಎಚ್.ಪಿ.ಸೋಮಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net