ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಿ

05-DVD-2
Published on

ದೇವದುರ್ಗ: ಬಿ.ಗಣೇಕಲ್ ಸೇರಿದಂತೆ ಗ್ರಾಮೀಣ ಭಾಗದ ನೂರರು ವಿದ್ಯಾರ್ಥಿಗಳು ದೇವದುರ್ಗಕ್ಕೆ ವಿದ್ಯಾಭ್ಯಾಸ ಮಾಡಲು ಬರುತ್ತಿದ್ದು, ಹಳ್ಳಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಡಿಪೋ ಮ್ಯಾನೇಜರ್ ಪಿ.ಕೆ.ಜಾಧವ್‌ಗೆ ಬಿಎಸ್ಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಮನವಿ ಸಲ್ಲಿಸಿದರು.

ಸರ್ಕಾರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾರ್ಷಿಕ ಪಾಸ್ ವ್ಯವಸ್ಥೆ ಮಾಡಿದೆ. ಗ್ರಾಮೀಣ ಭಾಗದಿಂದ ತಾಲೂಕು ಕೇಂದ್ರ, ಗಬ್ಬೂರು, ಅರಕೇರಾ, ಜಾಲಹಳ್ಳಿಗೆ ಸುತ್ತಲಿನ ಹಲವಾರು ಹಳ್ಳಿಗಳ ವಿದ್ಯಾರ್ಥಿಗಳು ಅಭ್ಯಾಸ ಮಾಡಲು ಬರುತ್ತಾರೆ. ಆದರೆ, ಸಮರ್ಪಕವಾಗಿ ಬಸ್ ಸೌಲಭ್ಯವಿಲ್ಲದೆ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕೆಲವು ಕಡೆ ಬಸ್ ಸಂಚರಿಸಿದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಬಸ್‌ನಲ್ಲಿ ಜೋತುಬಿದ್ದು ಹೋಗುವ ಸ್ಥಿತಿಯಿದೆ ಎಂದು ದೂರಿದರು.

ಬಿ.ಗಣೇಕಲ್ ಗ್ರಾಮಕ್ಕೆ ಎಚ್.ಎನ್.ನಾಯ್ಕ ತಾಂಡಾ, ಸಮುದ್ರ, ಪಂದ್ಯಾನ ಮೂಲಕ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಭಾಗಕ್ಕೆ ಸಮಯಕ್ಕೆ ಸರಿಯಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಬಸ್ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿಗಳು ಹೆಚ್ಚಿರುವ ಭಾಗಕ್ಕೆ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net