

ಮಂಗಳೂರು: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯನೇಜ್‌ಮೆಂಟ್ ಕಾಲೇಜು ಅಡ್ಯಾರ್ ಮಂಗಳೂರು ಇಲ್ಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೂಪಶ್ರೀ ಇವರಿಗೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಯಿಂದ ಪಿಎಚ್‌ಡಿ ಪದವಿ ನೀಡಿದೆ. ಡಾ. ಅನುಷ್ ಬೇಕಲ್ ಮಾರ್ಗದರ್ಶನಲ್ಲಿ ಲ್ಯುಕೇಮಿಯಾ ಪತ್ತೆ ಮತ್ತು ವರ್ಗೀಕರಣಕ್ಕಾಗಿ ಕಂಪ್ಯೂಟರ್ ನೆರವಿನ ನಿರ್ಧಾರ ಬೆಂಬಲ ವ್ಯವಸ್ಥೆಯ ಅಭಿವೃದ್ಧಿ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಡಾಕ್ಟರ್ ಅಫ್‌ಫಿಲಾಸಪಿ ಪದವಿ ಪಡೆದಿದ್ದಾರೆ. ಇವರು ನಿವೃತ್ತ ಪ್ರಾಂಶುಪಾಲ ರಮಾನಾಥ ಬಿ, ಸುನಂದ ಎಸ್ ದಂಪತಿಗಳ ಪುತ್ರಿ.