

ಬೈಲಹೊಂಗಲ: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ರೂಪಾ ಪಾಟೀಲ ಅವರಿಗೆ ನೇಗಿಲಯೋಗಿ ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ ಹಾಗೂ ಪತ್ನಿ ಶ್ವೇತಾ ಬೋಳನ್ನವರ ವಿದ್ಯಾರ್ಥಿನಿಗೆ 10 ಸಾವಿರ ರೂ.ಪ್ರೋತ್ಸಾಹ ಧನ ನೀಡಿ ಭಾನುವಾರ ಸನ್ಮಾನಿಸಿದರು.
ಶಂಕರ ಬೋಳನ್ನವರ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರೂಪಾ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದ್ದು, ಬೈಲಹೊಂಗಲದ ಕೀರ್ತಿ ಹೆಚ್ಚಿದೆ. ಇತರ ವಿದ್ಯಾರ್ಥಿಗಳಿಗೆ ರೂಪಾ ಸಾಧನೆ ಮಾದರಿಯಾಗಿದೆ.
ಅವಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಸಂಘದ ಮುಖಂಡರಾದ ಮಹಾಂತೇಶ ಬೋಳನ್ನವರ, ಅನಿಲ ಗೀರನ್ನವರ, ಉಪನ್ಯಾಸಕ ರಮೇಶ ಯರಗಟ್ಟಿ, ಅದಶ್ಯಪ್ಪ ಹುಚ್ಚನ್ನವರ, ಶಂಕರಗೌಡ ಪಾಟೀಲ, ಬಸವರಾಜ ಜಂಬಗಿ, ಬಾಬು ಸಂಗೊಳ್ಳಿ ಹಾಗೂ ಪ್ರಭಾವತಿ ಕಡಬಿ, ವಿದ್ಯಾ ಯರಗಟ್ಟಿ, ಜ್ಯೋತಿ ಬೋಳನ್ನವರ ಇತರರಿದ್ದರು.