ರನ್ನ ಕಾರ್ಖಾನೆ ಷೇರುದಾರರ ಸಭೆ ಇಂದು

Run's factory shareholders meeting today
ತಾಲೂಕಿನ ತಿಮ್ಮಾಪುರದ ರನ್ನ ರೈತ ಸಹಕಾರಿ ಸಕ್ಕರೆ ಕಾರ್ಖಾನೆ.
Published on

ಮುಧೋಳ: ತಾಲೂಕಿನ ತಿಮ್ಮಾಪುರದ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಗೊಳ್ಳುವ ಲಕ್ಷಣ ದಟ್ಟವಾಗಿದೆ.
ಫ್ಯಾಕ್ಟರಿ ಮರು ಆರಂಭಿಸುವ ಹಿನ್ನೆಲೆಯಲ್ಲಿ ಷೇರುದಾರರ ಹಾಗೂ ಹಿತಚಿಂತಕರ ಸಭೆ ಸೆ.24 ರಂದು ಕಾರ್ಖಾನೆ ಆವರಣದಲ್ಲಿ ನಡೆಯಲಿದೆ ಎಂದು ಷೇರುದಾರರ ಹಿತಚಿಂತಕ ದಯಾನಂದ ಪಾಟೀಲ ಹಾಗೂ ಲೋಕಾಪುರದ ವಿಠ್ಠಲ ತುಮ್ಮರಮಟ್ಟಿ ತಿಳಿಸಿದ್ದಾರೆ.

ಸಹಕಾರಿ ಕಾರ್ಖಾನೆ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ರನ್ನ ಕಾರ್ಖಾನೆ ಮಾಜಿ ಸಚಿವ ಎಸ್.ಆರ್ ಪಾಟೀಲ ಒಡೆತನದ ಬೀಳಗಿ ಶುಗರ್ಸ್ ಮಿಲ್ ಪಾಲಾಗಿದೆ. ಮುಧೋಳ ತಾಲೂಕಿನ ಹಿತಚಿಂತಕ ರೈತರ ಹಾಗೂ ಷೇರುದಾರರ ಸಲಹೆ, ಸೂಚನೆ ಮತ್ತು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ತಾಲೂಕಿನ ರೈತರು, ಷೇರುದಾರರು ತಪ್ಪದೆ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net