

ಗಲಗಲಿ: ಸಹಕಾರಿ ಸಂಸ್ಥೆಯೊಂದನ್ನು ತೆರೆಯುವುದು ತುಂಬ ಸರಳ. ಆದರೆ, ಅದನ್ನು ಜವಾಬ್ದಾರಿಯಿಂದ ಮುನ್ನೆಡೆಸಿಕೊಂಡು ಹೋಗುವುದು ತುಂಬ ಕಷ್ಟದ ಕೆಲಸವಾಗಿದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದಗಣಿ ನಿಗಮದ ಅಧ್ಯಕ್ಷ ಜೆ.ಟಿ. ಪಾಟೀಲ ಹೇಳಿದರು.
ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ಓಂ ಪ್ರಭುಸೌಹಾರ್ದ ಪತ್ತಿನ ಸಹಕಾರಿ ಸಂಘ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸೌಹಾರ್ದ ಸಹಕಾರ ಸಂಘಗಳನ್ನು ಸರಿಯಾಗಿ ನಡೆಸುವುದು ಕಮಿಟಿಯ ಜವಾಬ್ದಾರಿಯಾಗಿರುತ್ತದೆ. ಸಾಲ ಕೊಡುವಾಗ ನಿರ್ಲಕ್ಷವಹಿಸುವಂತಿಲ್ಲ, ಸರಿಯಾದ ಪತ್ತು ಇಲ್ಲದೇ ಇರುವಾಗ ಸಾಲ ನೀಡಿ ತಪ್ಪುಮಾಡಬೇಡಿ ಎಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಸ್ಟ್ರಾಂಗ್ ರೂಮ್ ಉದ್ಘಾಟಿಸಿ ಶುಭ ಕೋರಿದರು. ಮರೆಗುದ್ದಿಯ ಅಡವಿ ಮಠದ ನಿರುಪಾಧೀಶ್ವರ ಸ್ವಾಮಿಗಳು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಮರೆಗುದ್ದಿಯ ಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಕೊಣ್ಣೂರಿನ ವಿಶ್ವಪ್ರಭುದೇವ ಶಿವಾಚಾರ್ಯ ಮಹಾಸ್ವಾಮಿಗಳು, ಬೀಳಗಿಯ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಶಿವಾನಂದ ಹಿರೇಮಠ ಹಾಗೂ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಮಠ, ಉಪಾಧ್ಯಕ್ಷ ಜಗದೀಶ ಕತ್ತಿ, ನಿರ್ದೇಶಕರಾದ ಈರಣ್ಣ ಗೌಡ ನ್ಯಾಮಗೌಡ, ಗುರುಪಾದಯ್ಯ ಹಿರೇಮಠ, ಮಂಜುನಾಥ ಕಣಬೂರ, ಬಸಪ್ಪ ವಾಲಿ, ಶಿವಯ್ಯ ಗಣಾಚಾರಿ, ಅನಂದ ಗಾಣಿಗೇರ,ವಸಂತ ಪತ್ತಾರ, ಸಿದ್ಧರಾಯ ಭೋವಿ, ಮಗಿಯಪ್ಪ ದೇವನಾಳ, ಶಶಿಕಲಾ ಹೊಸಮನಿ, ಸವಿತಾ ಪಾಟೀಲ ಉಪಸ್ಥಿತರಿದ್ದರು. ಮುಕಾನಿ ಬಸಲಿಂಗಯ್ಯ ಹಿರೇಮಠ ನಿರ್ವಹಿಸಿದರು.