ಮುಕ್ಕಾಟಿರ ಕನುಷಿ ಕಾವೇರಮ್ಮಗೆ ರನ್ನರ್ ಅಪ್ ಗೌರವ

kanushi kaveramma
Published on

ಮೈಸೂರು: ನಗರದ ವಿದ್ಯಾರಣ್ಯಪುರಂನ ಫಾರ್ಚೂನ್ ಷಟಲ್ಸ್ನಲ್ಲಿ ಭಾನುವಾರ ಪಡುಕೋಣೆ ಸ್ಪೋರ್ಟ್ಸ್ ಮ್ಯಾನೆನೇಜ್‌ಮೆಂಟ್‌ನಿಂದ ಆಯೋಜಿಸಿದ್ದ 11 ವರ್ಷ ವಯೋಮಿತಿಯ ಪಿಎಸ್‌ಎಂ ಜೂನಿಯರ್ ಓಪನ್ ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಕ್ಕಾಟಿರ ಕನುಷಿ ಕಾವೇರಮ್ಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.


ಈಕೆ ಮೂಲತಃ ಕೊಡಗು ಜಿಲ್ಲೆಯ ನಿಟ್ಟೂರು ಕಾರ್ಮಾಡ್ ನಿವಾಸಿ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಮುಕ್ಕಾಟಿರ ನಿತನ್ ಪೂಣಚ್ಚ-ನಿಲನ್ ಪೂಣಚ್ಚ ದಂಪತಿ ಪುತ್ರಿ. ನಿಲನ್ ಪೂಣಚ್ಚ ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಆಗಿದ್ದಾರೆ. ಮುಕ್ಕಾಟಿರ ಕನುಷಿ ವಿಜಯನಗರದ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net