ಶಿವನಸಮುದ್ರದಲ್ಲಿ ಎಸ್‌ಆರ್‌ಆರ್‌ಪಿ ಯೋಜನೆ ಅನುಷ್ಠಾನ: ಅಧಿವೇಶನದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಹಿತಿ

shivanasamudra
Published on

ಮಂಡ್ಯ: ಮಳವಳ್ಳಿ ತಾಲೂಕು ಶಿವನಸಮುದ್ರದಲ್ಲಿ 200 ಮೆ.ವ್ಯಾ ಸಾಮರ್ಥ್ಯದ ಶಿವನಸಮುದ್ರ ರನ್-ಆಫ್-ದಿ-ರಿವರ್(ಎಸ್‌ಆರ್‌ಆರ್‌ಪಿ) ಯೋಜನೆಯನ್ನು 893.65 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಎಂಎಲ್‌ಸಿ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಯೋಜನೆಯನ್ನು ಅನುಷ್ಠಾನಗೊಳಿಸಲು ಜೋನಲ್ ಮಾಸ್ಟರ್ ಪ್ಲಾೃನ್ ಸಮಿತಿಯ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶಿಂಷಾ ಮತ್ತು ಶಿವನಸಮುದ್ರದಲ್ಲಿರುವ ಜಲವಿದ್ಯುತ್ ಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 59.20 ಮೆ.ವ್ಯಾ ಇದೆ. 2015-16 ರಿಂದ 2022-23ನೇ ಸಾಲಿನವರೆಗೆ 2114,49 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಒಟ್ಟು 246.77 ಕೋಟಿ ರೂ ಆದಾಯ ಗಳಿಸಿದ್ದರೆ, ದುರಸ್ತಿ/ ಸುರಕ್ಷತೆಗಾಗಿ 34.91 ಕೋಟಿ ರೂಗಳನ್ನು ವ್ಯಯಿಸಲಾಗಿದೆ. ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಎಸ್ಕಾಂಗಳಿಗೆ ಹಂಚಿಕೆ ಮಾಡಲಾಗುತ್ತದೆ. ತರುವಾಯ ಎಸ್ಕಾಂಗಳು ವಿದ್ಯುತ್ ಅನ್ನು ರೈತರು, ಗೃಹಬಳಕೆ, ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಸರಬರಾಜು ಮಾಡುತ್ತದೆ ಎಂದು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net