ಹುಬ್ಬಳ್ಳಿಯಿಂದ ನಂದಗಡವರೆಗೆ ಓಟ 14ರಂದು

10 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮದಿನ ಹಾಗೂ ಸ್ವಾತಂತ್ರ್ಯೋತ್ಸವ ನಿಮಿತ್ತ ಹುಬ್ಬಳ್ಳಿಯಿಂದ ನಂದಗಡವರೆಗೆ ಅಂತಾರಾಷ್ಟ್ರೀಯ ಮ್ಯಾರಾಥಾನ್​ ಓಟಗಾರ ಮಲ್ಲಪ್ಪಾ ಪೂಜೇರಿ ಓಟ ನಡೆಸಲಿದ್ದಾರೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಸುರೇಶ ಗೋಕಾಕ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 14ರಂದು ರಾತ್ರಿ 1 ಗಂಟೆಗೆ ಹುಬ್ಬಳ್ಳಿ ಚನ್ನಮ್ಮವೃತ್ತದಿಂದ ನಂದಗಡವರೆಗೆ ಓಟ ನಡೆಸಲಿದ್ದಾರೆ. ಹುಬ್ಬಳ್ಳಿ, ಧಾರವಾಡ, ಕಿತ್ತೂರ, ಬೀಡಿ ಮಾರ್ಗವಾಗಿ ಆ. 15ರಂದು ಬೆಳಗ್ಗೆ 9 ಗಂಟೆಗೆ ನಂದಗಡ ತಲುಪಲಿದ್ದಾರೆ. ನಂತರ ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುಮಾರು 85 ಕಿ.ಮೀ ಮಾರ್ಗವನ್ನು 9 ಗಂಟೆಯಲ್ಲಿ ಕ್ರಮಿಸಲಿದ್ದಾರೆ. 9 ವರ್ಷಗಳಿಂದ ಈ ಓಟ ನಡೆಸುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ರಸ್ತೆ ಸುತ್ತ ಮಲ್ಲಪ್ಪ ಅವರಿಗೆ ಹುರುದುಂಬಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಓಟದಲ್ಲೂ ಸಾಧನೆ ಮಾಡಿರುವ ಮಲ್ಲಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್​ ಅವರು ಕಾರ್ಮಿಕ ಇಲಾಖೆಯಲ್ಲಿ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಅಶೋಕ ಹಾದಿಮನಿ, ಚನ್ನಪ್ಪ ಅಸುಂಡಿ, ಪ್ರವಿಣ ಗೋಕಾವಿ, ಮಲ್ಲಪ್ಪ ಪೂಜೇರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net