

ವಿಜಯವಾಣಿ ಸುದ್ದಿಜಾಲ ಉಡುಪಿ
ದೇಶದ ಮೊದಲ ಉಪಪ್ರಧಾನಿ, ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಏಕತಾ ದಿವಸದ ನಿಮಿತ್ತ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಶುಕ್ರವಾರ ಭಾರತದ ಐಕ್ಯತೆಯ ಓಟ (ರನ್ ಫಾರ್ ಯುನಿಟಿ) ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ್ ವಿ. ಬಡಿಗೇರ, ಪೊಲೀಸ್ ಉಪನಿರೀಕ್ಷಕ ಭರತೇಶ್, ಪೊಲೀಸ್ ನಿರೀಕ್ಷಕ ನಾರಾಯಣ, ಹಿರಿಯಡಕ ಠಾಣೆಯ ಪೊಲೀಸ್ ಉಪನಿರೀಕ್ಷಕ ಪುನೀತಕುಮಾರ್, ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಇತರರು ಉಪಸ್ಥಿತರಿದ್ದರು.
ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು. ವಸುದೈವ ಕುಟುಂಬಕಂ ಎಂಬ ತತ್ವದ ನೆಲೆಯಲ್ಲಿ ನಾವೆಲ್ಲರೂ ಈ ರಾಷ್ಟ್ರದ ಹಿತ ಕಾಪಾಡಬೇಕು. ವಿದ್ಯಾರ್ಥಿಗಳೆಲ್ಲರೂ ಕಲಿಕೆಯ ಸಂದರ್ಭದಲ್ಲಿಯೇ ಯಾವುದೇ ಜಾತಿ-ಮತ, ಭೇದ-ಭಾವಕ್ಕೆ ಆಸ್ಪದ ಕೊಡದೆ ಸುಶಿಕ್ಷಿತರಾಗುವ ಮೂಲಕ ಭಾರತದ ಏಳಿಗೆಯಲ್ಲಿ ಕೈಜೋಡಿಸಬೇಕು. ಇಂದು ಮಾಡಿರುವ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ತಾವೆಲ್ಲರೂ ಶಿರಸಾ ಪಾಲಿಸಬೇಕು. | ಹರಿರಾಂ ಶಂಕರ್. ಜಿಲ್ಲಾ ಪೊಲೀಸ್ ವರಿಷ್ಠ