ರನ್ ಫಾರ್ ನೇಚರ್, ಹುಬ್ಬಳ್ಳಿ ತೋಳನಕೆರೆಯಿಂದ 3, 5 ಕಿ.ಮೀ. ಓಟ

IMG_20240606_122145_683.jpg
Published on

ಹುಬ್ಬಳ್ಳಿ: ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿಕೇರ್ ಫೌಂಡೇಷನ್ ಹಾಗೂ ವಸುಂದರಾ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 9ರಂದು ಬೆಳಗ್ಗೆ 6ಕ್ಕೆ ನಗರದ ತೋಳನಕೆರೆ ಮುಖ್ಯದ್ವಾರದಿಂದ ರನ್ ಫಾರ್ ನೇಚರ್ ಎಂಬ 3 ಹಾಗೂ 5 ಕಿ.ಮೀ. ಓಟ ಏರ್ಪಡಿಸಲಾಗಿದೆ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೆಟೌನ್ ಗ್ರುಪ್ ಮುಖ್ಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಪರಿಸರದಲ್ಲಿ ಆಗುತ್ತಿರುವ ಬದಲಾವಣೆ, ಅಂತರ್ಜಲ ಕುಸಿತ, ಹವಾಮಾನ ವೈಪರೀತ್ಯ, ಕಾಡುಗಳ ನಾಶ ಮುಂತಾದ ಪರಿಸರ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರನ್ ಫಾರ್ ನೇಚರ್ ನಡೆಯಲಿದೆ. ಸುಮಾರು 1500 ಜನರು, ವಿದ್ಯಾಥಿರ್ಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ರಾಜ್ಯ ಪರಿಸರ ಪ್ರಶಸ್ತಿ ಪುರಸತ ಎಂ.ಬಿ. ನಾಯಕ, ಕಾಗಿರ್ಲ್ ಯುದ್ದದ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಈ ಭಾಗದ ಜನಪ್ರತಿನಿಧಿಗಳಾದ ಪ್ರಲ್ಹಾದ ಜೋಶಿ, ಸಂತೋಷ ಲಾಡ್, ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಇತರರು ಪಾಲ್ಗೊಳ್ಳುವರು ಎಂದರು.

ವಿಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಸುಂದರಾ ಫೌಂಡೇಷನ್ ಅಧ್ಯಕ್ಷ ಮೇರಾಜ ಕೆರೂರ, ನಾಗರಾಜ ಮಾಕಾವಿ, ಮೂರುಸಾವಿರಪ್ಪ ಮೆಣಸಿನಕಾಯಿ ಇದ್ದರು.

ಗಿಡ ನೆಡಲು ಜಾಗವಿಲ್ಲ:
ಕಾಂಕ್ರೀಟ್ ನಿಂದಾಗಿ ಹಸಿರೀಕರಣಕ್ಕೆ ಧಕ್ಕೆಯಾಗುತ್ತಿದೆ. ರಸ್ತೆ ಅಕ್ಕಪಕ್ಕ ಜಾಗ ಬಿಡದೇ ಕಾಂಕ್ರಿಟ್ ಹಾಕುವುದರಿಂದ ಎಲ್ಲಿಯೂ ಗಿಡ ನೆಡಲು ಅವಕಾಶ ಇರುವುದಿಲ್ಲ. ಹಾಗಾಗಿ ರಸ್ತೆಗಳ ಎರಡೂ ಬದಿಯಲ್ಲಿ ಗಿಡ, ಮರಗಳಿಗೆ ಜಾಗ ಮೀಸಲಿಟ್ಟು ರಸ್ತೆ ನಿಮಿರ್ಸುವುದು ಅಗತ್ಯ ಎಂದು ಚನ್ನು ಹೊಸಮನಿ ಹೇಳಿದರು.

ಈ ವರ್ಷ ಕನಿಷ್ಠ 10 ಸಾವಿರ ಸಸಿ ನೆಡುವ ಉದ್ದೇಶ ಹೊಂದಿದ್ದೇವೆ. ಮಹಾನಗರ ಪಾಲಿಕೆಯುವರು ಸಹ ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಅವರನ್ನು ಸಂಪಕಿರ್ಸಿ ಇನ್ನಷ್ಟು ವಿವರ ಪಡೆಯಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net