ರನ್ ಫಾರ್ ನೇಚರ್ 8ರಂದು

IMG-20250604-WA0014.jpg
Published on

ಹುಬ್ಬಳ್ಳಿ: ಇಲ್ಲಿಯ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿ ಕೇರ್, ವಸುಂಧರಾ ಫೌಂಡೇಷನ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರನ್ ಫಾರ್ ನೇಚರ್ 3.0 ಕಾರ್ಯಕ್ರಮವನ್ನು ಜೂನ್ 8ರಂದು ಬೆಳಗ್ಗೆ 6.30ಕ್ಕೆ ಆಯೋಜಿಸಲಾಗಿದೆ.

ನಗರದ ತೋಳನಕೆರೆ ಬಳಿಯ ಟೆಂಡರ್ ಶ್ಯೂರ್ ರಸ್ತೆಯಲ್ಲಿ 3 ಕಿ.ಮೀ. ಹಾಗೂ 5 ಕಿ.ಮೀ. ರನ್ ನಡೆಯಲಿದೆ. ಮನೆಗೊಂದು ಮಾವಿನ ಮರ ಅಭಿಯಾನ ಸಹ ಏರ್ಪಡಿಸಲಾಗಿದೆ.

ಅತಿಥಿಗಳಾಗಿ ಪರಿಸರ ಕೃಷಿ ತಜ್ಞ ಶಿವಾನಂದ ಕಳವೆ, ರೈತ ಮಹಿಳೆ ಕವಿತಾ ಮಿಶ್ರಾ ಪಾಲ್ಗೊಳ್ಳುವರು. ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ನೇತೃತ್ವ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net