ಪರಿಸರಕ್ಕಾಗಿ ಓಟ

run
Published on

ಹುಬ್ಬಳ್ಳಿ: ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ ಸುದ್ದಿ ವಾಹಿನಿ ಮಾಧ್ಯಮ ಸಹಯೋಗ ಹಾಗೂ ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂಧರಾ ಫೌಂಡೇಷನ್ ಮತ್ತು ವಿ ಕೇರ್ ಫೌಂಡೇಷನ್ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ರನ್ ಫಾರ್ ನೇಚರ್’ (ಪರಿಸರಕ್ಕಾಗಿ ಓಟ)ಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು. ಬೆಳ್ಳಂಬೆಳಗ್ಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಓಡಿ ಪರಿಸರ ಜಾಗೃತಿ ಮೂಡಿಸಿದರು.
ನಗರದ ತೋಳನಕೆರೆ ಬಳಿ ಶಾಸಕ ಮಹೇಶ ಟೆಂಗಿನಕಾಯಿ ಅವರು ಪರಿಸರಕ್ಕಾಗಿ ಓಟಕ್ಕೆ ಚಾಲನೆ ನೀಡಿದರು. ಇಲ್ಲಿಂದ ಆರಂಭವಾದ ಓಟ, ಟೆಂಡರ್ ಶ್ಯೂರ್ ರಸ್ತೆ ಮಾರ್ಗವಾಗಿ ಸಾಗಿ ವಿದ್ಯಾನಗರದ ಓಕ್ಸ್ ಹೋಟೆಲ್‌ವರೆಗೆ ತೆರಳಿತು. ಅಲ್ಲಿಂದ ಮರಳಿ ತೋಳನಕೆರೆ ಹತ್ತಿರ ತಲುಪಿತು. 6 ಕೆ ಮತ್ತು 3 ಕೆ ಓಟವನ್ನು ಬಹುತೇಕರು ಪೂರ್ಣಗೊಳಿಸಿ ಸಂಭ್ರಮಿಸಿದರು. ಓಡಿ ಬಂದವರಿಗೆ ಪದಕ, ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಹನಾಯಿ, ಕರಡಿಮಜಲು, ಗೊಂಬೆ ಕುಣಿತವೂ ಓಡುವವರಿಗೆ ಪುಳಕ ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net