

ಕಲಘಟಗಿ: 76ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಭಿವೃದ್ಧಿಗಾಗಿ ‘ರನ್ ಫಾರ್ ಮೋದಿ’ ಎಂಬ ಶೀರ್ಷಿಕೆಯಡಿ ಆ. 15ರ ಬೆಳಗ್ಗೆ 10 ಗಂಟೆಗೆ ದಾಸ್ತಿಕೊಪ್ಪದ ಬಿಪಿಸಿಎಲ್ ಪೆಟ್ರೋಲ್ ಬಂಕ್ನಿಂದ ಪಟ್ಟಣದ ಯುವಶಕ್ತಿ ಸರ್ಕಲ್ವರೆಗೆ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಗೆಳೆಯರ ಬಳಗ ಹಾಗೂ ಪ್ರಲ್ಹಾದ ಜೋಶಿ ಅಭಿಮಾನಿ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.