

ಮೈಸೂರು: ದಸರಾ ಚಲನಚಿತ್ರೋತ್ಸವ ಅಂಗವಾಗಿ ನಗರದ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದ ಹೊರ ಆವರಣದಲ್ಲಿ ಕನ್ನಡ ಸಿನಿಮಾ ಬೆಳೆದು ಬಂದ ಹಾದಿಯ ‘ಸಿನಿ ಪೋಟೋ ಪ್ರದರ್ಶನ’ಕ್ಕೆ ಚಿತ್ರ ನಿರ್ದೇಶಕಿ ಸುಮನಾ ಕಿತ್ತೂರು ಶುಕ್ರವಾರ ಚಾಲನೆ ನೀಡಿದರು.
ಛಾಯಾಗ್ರಾಹಕ ಅಶ್ವತ್ಥನಾರಾಯಣ್ ಅವರು ಸೆರೆಹಿಡಿದಿರುವ ಅಪರೂಪದ ಚಿತ್ರಗಳ ಪ್ರದರ್ಶನ ಇದಾಗಿದೆ. ಚಲನಚಿತ್ರೋತ್ಸವ ಅಧಿಕಾರೇತರ ಸಮಿತಿಯ ಅಧ್ಯಕ್ಷ ಪ್ರವೀಣ್ ಕೃಪಾಕರ್, ಚಲನಚಿತ್ರೋತ್ಸವ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಕೆ.ಎನ್.ಬಸವರಾಜ, ಕಾರ್ಯಾಧ್ಯಕ್ಷ ರಂಗೇಗೌಡ, ಕಾರ್ಯದರ್ಶಿ ಟಿ.ಕೆ. ಹರೀಶ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.