

ಹುಬ್ಬಳ್ಳಿ: ಇಲ್ಲಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ಕಾರ್ಯಾಚರಣೆ ನಡೆಸಬೇಕು, ಜನದಟ್ಟಣೆ ಇಲ್ಲದ ವಾಹನಗಳ ಕಾರ್ಯಾಚರಣೆಯ ಬಗ್ಗೆ ಪರಿಶೀಲಿಸಿ ಅವಶ್ಯಕತೆ ಇಲ್ಲದ ಅನುಸೂಚಿಗಳನ್ನು ರದ್ದುಗೊಳಿಸಿ, ಹೆಚ್ಚಿನ ಜನದಟ್ಟಣೆ ಇರುವ ಮಾರ್ಗಗಳಲ್ಲಿ ಅಳವಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು, ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ., ಸಂಸ್ಥೆಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಪಿ.ವೈ. ನಾಯಕ, ಬಸವರಾಜ ಅಮ್ಮನ್ನವರ, ಜಗದಂಬಾ ಕೋಪರ್ಡೆ, ದಿವಾಕರ ಯರಗೊಪ್ಪ, ಬಿಆರ್ಟಿಎಸ್ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್ ಎಂ, ರಮೇಶ ಗುಡರಡ್ಡಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶಶಿಧರ ಚನ್ನಪ್ಪಗೌಡರ, ಎಚ್. ರಾಮನಗೌಡರ, ಎಂ. ಸಿದ್ಧಲಿಂಗೇಶ ಹಾಗೂ ಅಧಿಕಾರಿಗಳಾದ ಎಂ.ಬಿ. ಕಪಲಿ, ರವಿ ಅಂಚಿಗಾವಿ, ಪಿ.ಆರ್. ಕಿರಣಗಿ, ಶಿವಾನಂದ ನಾಗಾವಿ, ದಯಾನಂದ ಪಾಟೀಲ ಉಪಸ್ಥಿತರಿದ್ದರು.