ರೋಟರಿ ಕ್ಲಬ್‌ನಿಂದ ಹಾಫ್ ಮ್ಯಾರಾಥಾನ್

press meet (1)
filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.41583297, 0.5100415);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 36;
Published on

ಬೆಳಗಾವಿ: ರೋಟರಿ ಕ್ಲಬ್ ಆಫ್ ವೇಣುಗ್ರಾಮ ವತಿಯಿಂದ ‘ಪ್ರತಿಯೊಂದು ಹೆಜ್ಜೆಗೂ ಒಂದೊಂದು ಕಥೆಯಿದೆ’ ಎಂಬ ಧ್ಯೇಯವಾಕ್ಯದೊಂದಿಗೆ ಆರೋಗ್ಯಕರ ಜೀವನ, ಸದೃಢ ಸಮುದಾಯ ಜಾಗೃತಿಗಾಗಿ ನ.16ರಂದು ನಗರದಲ್ಲಿ ಹಾಫ್ ಮ್ಯಾರಾಥಾನ್ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಶಿಕಾಂತ ನಾಯ್ಕ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಲ್‌ಇ ಸೊಸೈಟಿಯಿ ಲಿಂಗರಾಜ್ ಕಾಲೇಜು ಮೈದಾನದಿಂದ ಅಂಗಡಿ ಕಾಲೇಜ್‌ವರೆಗೆ ಹಾಫ್ ಮ್ಯಾರಾಥಾನ್ 21ಕಿಮೀ, 10ಕಿಮೀ, 5ಕಿಮೀ ಹಾಗೂ 3ಕಿಮೀ ವಿಭಾಗದಲ್ಲಿ ಆಯೋಜಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಅನೇಕ ಓಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಆಯಾ ವಿಭಾಗದ ವಿಜೇತರಿಗೆ ಬಹುಮಾನಗಳಿವೆ. ವಾಯವ್ಯ ಲ್ಯಾಬ್, ಟಿ ಟೋಸ್ಟ್ ಆ್ಯಂಡ್ ಕೋ, ಕೆಎಲ್‌ಇ ಸೊಸೈಟಿ, ಎಂಎಲ್‌ಐಆರ್‌ಸಿ, ಜ್ಯೂನಿಯರ್ ಲೀಡರ್ಸ್‌ ವಿಂಗ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಕ್ರೀಡ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಈ ಮ್ಯಾರಾಥಾನ್ ಆಯೋಜಿಸಲಾಗಿದೆ. ಇದಕ್ಕೂ ಮುಂಚೆ ನ. 13, 14ರಂದು ನಗರದ ಮಿಲೇನಿಯಂ ಉದ್ಯಾನದಲ್ಲಿ ಡಾ.ಸಾಠೆಯವರ ಆರೋಗ್ಯ ಮಿತ್ರ ಫೌಂಡೇಶನ್ ಸಹಯೋಗದಲ್ಲಿ ಆರೋಗ್ಯ ಮತ್ತು ಫಿಟನೆಸ್ ಕುರಿತ ಮೇಳ ಇರಲಿದೆ ಎಂದರು.

ಲೋಕೇಶ ಹೊಂಗಲ, ನಿಲೇಶ ಬಂಗ, ಸಚಿವ ಕುಲಗೋಡ, ಉಮೇಶ ರಾಮಗುರವಾಡಿ, ಡಿ.ಬಿ.ಪಾಟೀಲ, ಡಾ.ವರ್ಷಾ ಸಾಠೆ, ನರೇಶ ಕುಲಗೋಡ, ಸಂಜೀವ ದೇಶಪಾಡೆ, ಕೆ.ವಿ.ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net