ವದಂತಿಗೆ ಕಿವಿಗೊಡದೆ ಪ್ರಗತಿಗೆ ಕೈಜೋಡಿಸಿ

chanraj
ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಗ್ರಾಮದಲ್ಲಿ ಸೋಮವಾರ ಅಂಗನವಾಡಿ ಕೇಂದ್ರವನ್ನು ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿ ಮಾತನಾಡಿದರು. ಮನೋಹರ ಬೆಳಗಾಂವ್ಕರ್, ಪೂಜಾ ಸುತಾರ, ಯಲ್ಲಪ್ಪ ಡೇಕೊಳ್ಕರ, ನಿಂಗಪ್ಪ ಮೊರೆ, ಡಾಕಳು ಪಾಟೀಲ ಇತರರಿದ್ದರು.
Published on

ಬೆಳಗಾವಿ: ಸೇವೆ ಮಾಡುವ ಅವಕಾಶ ಸಿಕ್ಕಿದ್ದು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಮಾದರಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ಗ್ರಾಮೀಣ ಕ್ಷೇತ್ರದ ರಕ್ಕಸಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಚುನಾವಣೆಗೆ ಮೊದಲು ನೀಡಿರುವ ಎಲ್ಲ ಭರವಸೆ ಈಡೇರಿಸುತ್ತಾರೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಈ ಸಂಬಂಧ ಯಾವುದೇ ವದಂತಿಗಳಿಗೆ ಯಾರೂ ಕಿವಿಗೊಡುವುದು ಬೇಡ ಎಂದು ವಿನಂತಿಸಿದರು. ಮನೋಹರ ಬೆಳಗಾಂವ್ಕರ್, ಪೂಜಾ ಸುತಾರ, ಯಲ್ಲಪ್ಪ ಡೇಕೊಳ್ಕರ, ನಿಂಗಪ್ಪ ಮೊರೆ, ಡಾಕಳು ಪಾಟೀಲ, ಕಾಶೀನಾಥ ಮೊರೆ, ಲಕ್ಷ್ಮೀ ಪಾಟೀಲ, ಮಂಜುಳಾ ಕಾಂಬಳೆ, ಮಹೇಶ ಪಾಟೀಲ, ಗಾಯತ್ರಿ ಸುತಾರ, ಬಬ್ಲು ನಾವಗೇಕರ್, ಸಾಗರ ನಾಯ್ಕ, ಸಾತಪ್ಪ ಪಾಟೀಲ, ವಿಲಾಸ ಪಾಟೀಲ, ಲಕ್ಷ್ಮ್ಮಣ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net