ಪಾರೆಕಟ್ಟೆಯಲ್ಲಿ ಚಿರತೆ ಸಂಚಾರ ವದಂತಿ

web - chirathe
Published on

ಕಾಸರಗೋಡು: ಉಪ್ಪಳ ನಯಾಬಜಾರ್ ಸನಿಹದ ಪಾರೆಕಟ್ಟೆ ಎಂಬಲ್ಲಿ ಚಿರತೆ ಸಂಚಾರದ ಬಗ್ಗೆ ವದಂತಿ ಹರಡಿದ್ದು, ನಾಗರಿಕರಲ್ಲಿ ಆತಂಕ ಎದುರಾಗಿದೆ. ಗುರುವಾರ ತಡರಾತ್ರಿ ಚಿರತೆಯನ್ನು ಹೋಲುವ ದೊಡ್ಡ ಪ್ರಾಣಿಯೊಂದನ್ನು ಕಂಡಿರುವುದಾಗಿ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಹುಡುಕಾಟ ನಡೆಸಿದರೂ ಚಿರತೆ ಕಂಡುಬಂದಿರಲಿಲ್ಲ. ಚಿರತೆ ಸಂಚಾರದ ಬಗ್ಗೆ ಯಾವುದೇ ಕುರುಹೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net