ಕರಿಂದಳದಲ್ಲಿ ಚಿರತೆ ವದಂತಿ

Leopard
ಸಾಂದರ್ಭಿಕ ಚಿತ್ರ
Published on

ಕಾಸರಗೋಡು: ಮುಳಿಯಾರು ಪಂಚಾಯಿತಿಯ ಬೋವಿಕ್ಕಾನ ಇರಿಯಣ್ಣಿಯಲ್ಲಿ ಚಿರತೆ ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಬೋನು ಅಳವಡಿಸಿ ನಿಗಾ ವಹಿಸುತ್ತಿರುವ ಮಧ್ಯೆ ಕಿನಾನೂರ್ ಕರಿಂದಳದಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ವದಂತಿ ವ್ಯಾಪಕವಾಗಿದೆ. ಕರಿಂದಳ, ಚೊಯ್ಯಂಗೋಡು, ಕಕ್ಕೋರ್ ಮುಂತಾದೆಡೆ ಹಾಡಹಗಲಲ್ಲೇ ಚಿರತೆ ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆನ್ನಲಾಗಿದೆ. ಕಕ್ಕೋಲ್ ಗುಡ್ಡ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆಹಿಡಿದಿದ್ದು ವೈರಲ್ ಆಗಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಚಿರತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net