ಮುಂಡರಗಿಯಲ್ಲಿ ಕರಡಿ ಓಡಾಟದ ವದಂತಿ

ಸಾಂದರ್ಭಿಕ ಚಿತ್ರ
15 bear
ಸಾಂದರ್ಭಿಕ ಚಿತ್ರ
Published on

ಮುಂಡರಗಿ: ಕರಡಿಯೊಂದು ಜನವಸತಿ ಪ್ರದೇಶದಲ್ಲಿ ಓಡಾಡಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ.
ವಾರದ ಹಿಂದೆ ಕಡ್ಲಿಪೇಟೆ ಓಣಿ ಭಾಗದಲ್ಲಿ ಕರಡಿ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡಿತ್ತು. ರಸ್ತೆಯಲ್ಲಿ ಅಲ್ಲಲ್ಲಿ ಕರಡಿಯೊಂದು ಓಡಾಡಿದ ದೃಶ್ಯ ಜಾಲತಾಣದಲ್ಲಿ ಈಗ ವೈರಲಾಗುತ್ತಿದೆ. ಇದರಿಂದ ಸಾರ್ವಜನಿಕರು ಆತಂಕದಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ ಈ ವಿಡಿಯೋ ಇಲ್ಲಿಯದ್ದೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಬೇರೆ ಭಾಗದಲ್ಲಿ ಕರಡಿ ಓಡಾಡಿದ ವಿಡಿಯೋವನ್ನು ಈ ಭಾಗದಲ್ಲಿ ಹರಿಬಿಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ವಿಷಯ ತಿಳಿದು ಕಪ್ಪತಗುಡ್ಡ ವಲಯ ಅರಣ್ಯಾಧಿಕಾರಿಗಳ ತಂಡ ಕಡ್ಲಿಪೇಟೆ ಓಣಿ, ಶಿರೋಳ, ಹಿರೇಹಳ್ಳದ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಕರಡಿ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ, ಎಲ್ಲೂ ಕರಡಿ ಕಾಣಿಸಿಕೊಂಡಿಲ್ಲ.

ಸಿಸಿಟಿವಿ ಕ್ಯಾಮರಾದ ವಿಡಿಯೋ ಬಂದಿದ್ದು, ಪಟ್ಟಣದಲ್ಲಿ ಹಲವು ಕಡೆ ಹುಡುಕಾಟ ನಡೆಸಿದ್ದು ಕರಡಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಕಪ್ಪತಗುಡ್ಡದಲ್ಲಿ ಕರಡಿಗಳಿಲ್ಲ. ಈ ಭಾಗದಲ್ಲಿ ಕರಡಿ ಇರುವ ಗುಹೆಯೂ ಇಲ್ಲ. ಸಿಸಿಟಿವಿ ಪರಿಶೀಲಿಸಿದ್ದು ಕರಡಿ ಓಡಾಡಿರುವುದು ಕಂಡುಬಂದಿಲ್ಲ. ಬೇರೆ ಭಾಗದ ವಿಡಿಯೋ ಇಲ್ಲಿ ಹರಿದಾಡುತ್ತಿದೆ. ಜನರು ಆತಂಕ ಪಡಬೇಕಿಲ್ಲ.-ವೀರೇಂದ್ರ ಮರಿಬಸಣ್ಣವರ. ಆರ್‌ಎಫ್ ಕಪ್ಪತಗುಡ್ಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net