ಅಕ್ರಮ ಮದ್ಯ ಸಾಗಣೆ, ಇಬ್ಬರ ಬಂಧನ

141421
Published on

ಬೆಳಗಾವಿ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಉತ್ತರ ಕನ್ನಡ ಮೂಲದ ಇಬ್ಬರು ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ಸಂತೋಷ ಕವಂದಲಕರ ಹಾಗೂ ಹಳಿಯಾಳ ಪಟ್ಟಣದ ಮಹ್ಮದ್‌ಗೌಸ್ ಮನಿಯಾರ ಬಂಧಿತರು. ಬೆಳಗಾವಿ ತಾಲೂಕಿನ ಕರ್ಲೆ-ಬಾದರವಾಡಿ ಮಾರ್ಗ ಮಧ್ಯೆ 18,720 ಸಾವಿರ ರೂ. ಮೌಲ್ಯದ 219 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ. ಎಎಸ್‌ಐ ಪಿಎಂ ಮೋಹಿತೆ, ಪೊಲೀಸ್ ಸಿಬ್ಬಂದಿಯಾದ ಬಿ.ಎಸ್. ಬಿಜಗತ್ತಿ, ಎಂ.ಡಿ. ಹೂಲಿ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net