ಉಪಾಧ್ಯಕ್ಷರಾಗಿ ರುಕ್ಮಿಣಿ ಪರಚನಗೌಡ್ರ

Rukmini Parachanagowdra as Vice President
ಖಜ್ಜಿಡೋಣಿ ಗ್ರಾಪಂಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ರುಕ್ಮಿಣಿ ಲಚ್ಚಪ್ಪ ಪರಚನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಸುಭಾಷ ಸಂಪಗಾವಿ, ಯಲ್ಲವ್ವ ವಿ. ಮಾದರ, ಪ್ರವೀಣ ಜಿ. ಅರಕೇರಿ, ಗಿರೀಶ ಮ. ತುಪ್ಪದ, ಶಾಸಪ್ಪ ಕುರಿ, ಲಕ್ಷ್ಮಣ ಆನಂದಿ ಮತ್ತಿತರರಿದ್ದಾರೆ.
Published on

ಕಲಾದಗಿ: ಖಜ್ಜಿಡೋಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರುಕ್ಮಿಣಿ ಲಚ್ಚಪ್ಪ ಪರಚನಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ, ತಾಪಂ ಇಒ ಸುಭಾಷ ಸಂಪಗಾವಿ ಘೋಷಿಸಿದರು.

ಮಂಜುಳಾ ಮುತ್ತಪ್ಪ ಕೆಂಜೋಡಿ ರಾಜೀನಾಮೆಯಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ವಿ. ಮಾದರ, ಸದಸ್ಯ ಪ್ರವೀಣ ಜಿ. ಅರಕೇರಿ, ಗಿರೀಶ ಮ. ತುಪ್ಪದ, ಶಾಸಪ್ಪ ಕುರಿ, ಲಕ್ಷ್ಮಣ ಆನಂದಿ, ಭಾರತಿ ಬಸವರಾಜ ಮಂಟೂರ, ಶಕುಂತಳಾ ಬಳಲದ, ಕಲಾವತಿ ಚಂದ್ರಶೇಖರ ಪಾಟೀಲ, ಅಂಬಿಕಾ ಪಾಂ. ಸಾಬನ್ನವರ್, ಪಿಡಿಒ ಕೆ.ಎಚ್. ಮುಲ್ಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net