

ಕಿಕ್ಕೇರಿ: ಹೋಬಳಿಯ ಆನೆಗೊಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷೆಯಾಗಿ ರುಕ್ಮಿಣಿ ದೇವರಾಜು ಅವಿರೋಧವಾಗಿ ಆಯ್ಕೆಯಾದರು.
ಡೇರಿ ಉಪಾಧ್ಯಕ್ಷರಾಗಿದ್ದ ಮಂಜುನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಪ್ರಕ್ರಿಯೆ ನಡೆಯಿತು. ರುಕ್ಮಿಣಿ ದೇವರಾಜು ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಭರತ್‌ಕುಮಾರ್ ಘೋಷಿಸಿದರು.
ನೂತನ ಉಪಾಧ್ಯಕ್ಷರಿಗೆ ಪುಷ್ಪಮಾಲೆ ಹಾಕಿ, ಸಿಹಿ ತಿನಿಸಿ, ಪಟಾಕಿ ಹೊಡೆದು ಅಭಿಮಾನಿಗಳು ಸಂಭ್ರಮಿಸಿದರು. ಡೇರಿ ಅಧ್ಯಕ್ಷ ರಕ್ಷಿತ್, ನಿರ್ದೇಶಕರಾದ ನಾಗಣ್ಣ, ನಾಗರಾಜು, ಮಂಜುನಾಥ್, ಜಗದೀಶ್, ಚನ್ನಕೇಶವ, ಸಂತೋಷ, ಪಟ್ಟರಾಜು, ಚಾಮುಂಡೇಶ್ವರಿ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎ.ಆರ್.ಮಂಜುನಾಥ್ ಇತರರು ಇದ್ದರು.