ಮೈಸೂರು ವಾರಿಯರ್ ತಂಡಕ್ಕೆ ಧಾರವಾಡದ ರೂಹಿ ಆಯ್ಕೆ

WhatsApp Image 2025-07-31 at 11.27.33 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಮಹಾರಾಣಿ ಟ್ರೋಫಿ ಆಯ್ಕೆ ಪ್ರಕ್ರಿಯೆಯಲ್ಲಿ ಧಾರವಾಡ ಕ್ರಿಕೆಟ್ ಅಕಾಡೆಮಿಯ ರೂಹಿ ದೊಡ್ಡಮನಿ ಮೈಸೂರು ವಾರಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಧಾರವಾಡ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ರೂಹಿ ಇತ್ತೀಚೆಗೆ ಕೆಎಸ್‌ಸಿಎ ಆಯೋಜಿಸುವ ಅಂತಾರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಳು. ವಿದ್ಯಾರ್ಥಿನಿ ಸಾಧನೆಗೆ ಅಕಾಡೆಮಿ ಅಧ್ಯಕ್ಷ ಎಸ್.ಸಿ. ನೀಲಗುಂದ, ಉಪಾಧ್ಯಕ್ಷ ಎಸ್.ಎಂ. ಅಗಡಿ, ತರಬೇತುದಾರ ಜಗದೀಶ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net