

ಯಳಂದೂರು: ಯಳಂದೂರು ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ರುದ್ರಯ್ಯರವರನ್ನು ಆಯ್ಕೆ ಮಾಡಲಾಯಿತು.
ಈಚೆಗೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಸರ್ವಸದಸ್ಯರ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ
ಡಲಾಯಿತು. ಈ ಸಂದರ್ಭದಲ್ಲಿ ರುದ್ರಯ್ಯ ಮಾತನಾಡಿ, ನಿವೃತ್ತ ಸರ್ಕಾರಿ ನೌಕರರ ಸಂಘದ ನಿಯಾವಳಿಗೆ ಅನುಗುಣವಾಗಿ ನಾನು ಕತವ್ಯ ನಿರ್ವಹಿಸುತ್ತೇನೆ. ಸಂಘದಲ್ಲಿರುವ ಸದಸ್ಯರಿಗೆ ಸಿಗುವ ಸವಲತ್ತುಗಳನ್ನು ಕೊಡಿಸಲು ನಾನು ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು. ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಮಹೇಶ್, ಕೋಶಾಧ್ಯಕ್ಷ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ರಾಮಸ್ವಾಮಿ, ಸಹಾಯಕ ಕಾರ್ಯದರ್ಶಿ ವೈ.ಆರ್. ರಂಗಸ್ವಾಮಿ, ಖಜಾಂಚಿ ನಾಗಯ್ಯ ಸೇರಿದಂತೆ ಅನೇಕರು ಇದ್ದರು.