ರುದ್ರಾಕ್ಷಿಮಠದಲ್ಲಿ ಶ್ರೀ ನಿಜಗುಣರ ಜಯಂತಿ ಉತ್ಸವ

IMG-20251109-WA0009_1-1.jpg
Published on

ಹುಬ್ಬಳ್ಳಿ: ಧರ್ಮ ಸಂಸ್ಕೃತಿ ಉಳಿಸುವ ಕಾರ್ಯದಲ್ಲಿ ನಗರದ ಶ್ರೀ ರುದ್ರಾಕ್ಷಿಮಠವು ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿಯ ಮಂಗಳವಾರ ಪೇಟ ಶ್ರೀರುದ್ರಾಕ್ಷಿಮಠದಲ್ಲಿ ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಉತ್ಸವದಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.

ಧರ್ಮದ ಏಕತೆಗೆ ಎಲ್ಲರೂ ಶ್ರಮಿಸಬೇಕಾಗಿದೆ. ಈ ದಿಸೆಯಲ್ಲಿ ಮಠ, ಮಾನ್ಯಗಳು ಭಕ್ತರಿಗೆ ಮಾರ್ಗದರ್ಶನ ಮಾಡಬೇಕು ಎಂದರು.

ನಿವೃತ್ತ ಶಿಕ್ಷಕ ಕೊಟ್ರೇಶ ಆರಾಧ್ಯಮಠ ಉಪನ್ಯಾಸ ನೀಡಿದರು. ದೊಡ್ಡವಾಡ ಶ್ರೀ ಜಡೆಯ ಸಿದ್ಧೇಶ್ವರ ಶಿವಾಚಾರ್ಯರು ಪ್ರವಚನ ನೀಡಿದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಕೈಗಾರಿಕೋದ್ಯಮಿ ಮೃತ್ಯುಂಜಯ ಮರೋಳ ಅವರನ್ನು ಸನ್ಮಾನಿಸಲಾಯಿತು. ಶ್ರೀಚನ್ನಮಲ್ಲದೇವರು, ಮಲ್ಲಿಕಾರ್ಜುನ ಸಾವಕಾರ, ಮೋಹನ ಶೆಟ್ಟರ, ಸದಾಶಿವ ಚೌಶೆಟ್ಟಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net