

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಹೊಸೂರಲ್ಲಿರುವ ದ ಫರ್ನ್ ರೆಸಿಡೆನ್ಸಿಯಲ್ಲಿ ಸೆಪ್ಟೆಂಬರ್ 28ರ ವರೆಗೆ ಭವ್ಯ ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ ಮೇಳ ಏರ್ಪಡಿಸಲಾಗಿದೆ.
ಹೈದ್ರಾಬಾದ್ ಮೂಲದ ಇಂಡಸ್- ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ನೇಪಾಳದ ರುದ್ರಾಕ್ಷಿಗಳ ಮೇಳದಲ್ಲಿ ವೈವಿಧ್ಯಮಯ ರುದ್ರಾಕ್ಷಿ ನೋಡಲು ಸಿಗುತ್ತಿವೆ.
ವಿರಳವಾಗಿ ದೊರಕುವ ಹಾಗೂ ರತ್ನದ ಹರಳುಗಳು ಸಹ ಲಭ್ಯ ಇವೆ. ಮೇಳದಲ್ಲಿ ಅತ್ಯಂತ ವಿರಳವಾಗಿರುವ ದುಂಡುಮುಖದ ಏಕಮುಖಿ ರುದ್ರಾಕ್ಷಿ ಲಭ್ಯ ಇವೆ.
ನವರಾತ್ರಿಯಲ್ಲಿ ರುದ್ರಾಕ್ಷಿಯನ್ನು ಧರಿಸುವುದು ಶುಭದಾಯಕ ಎಂಬ ನಂಬಿಕೆ ಇದೆ ಎಂದು ಇಂಡಸ್-ನೇಪಾಳ ಸಂಸ್ಥೆಯ ನಿರ್ದೇಶಕ ಡಾ. ನರೇಂದ್ರ ಕಾಶಿರೆಡ್ಡಿ ತಿಳಿಸಿದರು.
ಯಾವ ರುದ್ರಾಕ್ಷಿಯನ್ನು ಯಾವಾಗ ಹಾಗೂ ಯಾರು ಧರಿಸಬೇಕು ಎಂಬುದರ ಬಗ್ಗೆ ಯಾವುದೇ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ, ವೇದ ಗಣಿತದ ಮೂಲಕ ಜನ್ಮರಾಶಿ, ಜನ್ಮನಕ್ಷತ್ರದ ಆಧಾರದ ಮೇಲೆ ಇಲ್ಲಿ ತಿಳಿಸಲಾಗುವುದು. ಅಸಲಿ ಹಾಗೂ ನಕಲಿ ರುದ್ರಾಕ್ಷಿಗಳ ಭಿನ್ನತೆ ತಿಳಿಸಲಾಗುವುದು. ಗುಣಮಟ್ಟದ ರುದ್ರಾಕ್ಷಿಗಳನ್ನು ಗ್ರಾಹಕರಿಗೆ ಮಾರಾಟ ಮಾಡುವುದರಲ್ಲಿ ಇಂಡಸ್ -ನೇಪಾಳ ರುದ್ರಾಕ್ಷ ಸಂಸ್ಥೆ ವಿಶ್ವಾಸಾರ್ಹತೆ ಹೊಂದಿದೆ ಎಂದು ಹೇಳಿದರು.
ಮೇಳವು ಬೆಳಗ್ಗೆ 10.-30 ರಿಂದ ರಾತ್ರಿ 9ರ ವರೆಗೆ ನಡೆಯಲಿದೆ.