ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ

19manjari1-Web
ಹಳೇ ಯಡೂರ ಗ್ರಾಮದ ರುದ್ರಭೂಮಿ ನಿರ್ಮಾಣ ಕಾರ್ಯಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು. ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಅಮರ ಬೋರಗಾಂವೆ ಇತರರಿದ್ದರು.
Published on

ಮಾಂಜರಿ: ಯಡೂರು ವೀರಭದ್ರೇಶ್ವರ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದಿಂದ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಶ್ರೀ
ಕ್ಷೇತ್ರ ಯಡೂರಿನ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.

ಚಿಕ್ಕೋಡಿ ತಾಲೂಕಿನ ಹಳೆಯ ಯಡೂರ ಗ್ರಾಮದಲ್ಲಿ 24 ಲಕ್ಷ ರೂ. ವಿಶೇಷ ಅನುದಾನದಲ್ಲಿ ರುದ್ರಭೂಮಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಜ್ಯೋತಿ ಯೂಥ್ ಫೌಂಡೇಷನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ, ಶಿವತೇಜ್ ಫೌಂಡೇಷನ್ ಅಧ್ಯಕ್ಷ ಅಜಯ್ ಸೂರ್ಯವಂಶಿ, ಯಡೂರು ಗ್ರಾಪಂ ಮಾಜಿ ಅಧ್ಯಕ್ಷ ಅಮರ ಬೋರಗಾಂವೆ, ಚಂದೂರ ಪಿಕೆಪಿಎಸ್ ಮಾಜಿ ಅಧ್ಯಕ್ಷ ಮನೋಜ್ ಖಿಚಡೆ, ಅಣ್ಣಾಸಾಹೇಬ ಬೋರಗಾಂವೆ, ಚಂದ್ರಕಾಂತ ಕಮತೆ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net