ಉಪ್ಪಣಸಿ ಪಿಕೆಪಿಎಸ್​ಎಸ್​ಗೆ ರುದ್ರಪ್ಪ ಅಧ್ಯಕ್ಷ, ಸುರೇಶ ವಡ್ಡರ ಉಪಾಧ್ಯಕ್ಷ

20 AKR 02
Published on

ಅಕ್ಕಿಆಲೂರ: ರೈತರ ಪ್ರತಿ ಲೇವಾದೇವಿ ವ್ಯವಹಾರಕ್ಕೆ ಕೂಡಲೇ ಸ್ಪಂದಿಸುವ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಭಿವೃದ್ಧಿಯಾದಷ್ಟು, ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುತ್ತದೆ ಎಂದು ಸಹಕಾರಿ ಸಂಘದ ನೂತನ ಅಧ್ಯಕ್ಷ ರುದ್ರಪ್ಪ ಕಾಣಪ್ಪನವರ ಹೇಳಿದರು.

ಸಮೀಪದ ಉಪ್ಪಣಸಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಚುನಾವಣೆ ನಂತರ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೊಷಿಸುವ ಮಹತ್ವಾಕಾಂಕ್ಷೆ ಯೋಜನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನವಾಗಲು ಇಚ್ಛಾಶಕ್ತಿಯ ಅಗತ್ಯವಿದೆ. ಸಹಕಾರಿ ಸಂಘಗಳ ಸಾಲ- ಸೌಲಭ್ಯದಿಂದ ಇಂದು ಲಕ್ಷಾಂತರ ಕುಟುಂಬಗಳು ಆರ್ಥಿಕವಾಗಿ ಬಲಿಷ್ಠಗೊಂಡಿವೆ. ಆನ್​ಲೈನ್ ಹಣ ವರ್ಗಾವಣೆ ಹೊಸದೊಂದು ಕ್ರಾಂತಿ ಸೃಷ್ಟಿಸಿದ್ದು, ಹಳ್ಳಿಗಳ ಜನರ ಸಮಯ ಮತ್ತು ಹಣದ ಉಳಿತಾಯವಾಗುತ್ತಿದೆ. ಅದು ಸಹಕಾರಿ ಸಂಘಗಳಲ್ಲೂ ಪರಿಣಾಮಯಾಗಿ ಜಾರಿಯಾಗಬೇಕಿದೆ ಎಂದು ಹೇಳಿದರು.

ಉಪಾಧ್ಯಕ್ಷ ಸುರೇಶ ವಡ್ಡರ ಮಾತನಾಡಿ, ಸಣ್ಣ, ಪುಟ್ಟ ಯೋಜನೆ ಒಳಗೊಂಡ ಸಹಕಾರಿ ಸಂಘದ ಕುರಿತು ಸಾರ್ವಜನಿಕರಲ್ಲಿರುವ ನಿರ್ಲಕ್ಷ್ತ್ರ್ಯ ಮನೋಭಾವ ದೂರವಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವುದೇ ವ್ಯವಸ್ಥೆ ಸುಧಾರಿಸುವ ಮೂಲ ಮಾರ್ಗ ಎಂದು ಹೇಳಿದರು.

ಬಿನ್​ಸಾಲಗಾರ ಕ್ಷೇತ್ರಕ್ಕೆ ಶಿವಾನಂದ ಕಾಡಪ್ಪನವರ, ಸಾಲಗಾರ ಕ್ಷೇತ್ರದಿಂದ ದ್ಯಾವಪ್ಪ ಈಳಿಗೇರ, ಕಲ್ಪನಾ ಜಗಲಿ, ಮಲ್ಲಯ್ಯ ಹಿರೇಮಠ, ಮೋಹನ ಬಾಲಮ್ಮನವರ, ಲಕ್ಷ್ತ್ರಿ್ಮ ಗಡ್ಡೇರ, ಮೈಲಾರಪ್ಪ ಹೆಬ್ಬಾಳ, ಬಸವರಾಜ ಮರಡಪ್ಪನವರ, ಗುಡ್ಡಪ್ಪ ಬ್ಯಾಗವಾದಿ, ಕರಿಯಪ್ಪ ಗಂಟೇರ ನಿರ್ದೇಶಕರಾಗಿ ಆಯ್ಕೆಯಾದರು. ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜಶೇಖರ ಕಟ್ಟೆಗೌಡರ, ಬಸವರಾಜ ಹಾದಿಮನಿ, ಶಿವಯೋಗಪ್ಪ ಮಲ್ಲಿಗಾರ, ಶಿವಲಿಂಗಪ್ಪ ತಲ್ಲೂರ, ಮಹೇಶ ಬಣಕಾರ, ಎಸ್.ವಿ. ಕೊಪ್ಪದ, ಎಸ್.ವಿ. ಪಾಟೀಲ, ಎನ್.ಪಿ ನೇಲೂಗಲ್ಲ, ಪಿ.ಎನ್. ನಾಡಗೌಡರ, ಮಾರುತಿ ಬಾಲಮ್ಮನವರ, ಮಲ್ಲನಗೌಡ ಪಾಟೀಲ, ಮೈಲಾರಪ್ಪ ರಾಮಣ್ಣನವರ, ವೀರೇಶ ಕಾಡಪ್ಪನವರ, ಗುಡ್ಡಪ್ಪ ರಾಮಣ್ಣನವರ, ಸುರೇಶ ದೊಡ್ಡಮನಿ, ಪ್ರಕಾಶ ಹೇರೂರ, ಶಂಕರ ಎಲಿಕೊಂಡರ, ಬಸವರಾಜ ಈಳಿಗೇರ, ಚನ್ನಬಸಪ್ಪ ಈಳಿಗೇರ, ಫಕೀರಪ್ಪ ಸುಣಗಾರ, ನಾಗಪ್ಪ ರ್ಬಾ, ಮೆಹಬೂಬ್ ಶಾ ಮುಲ್ಲಾ, ಮುನ್ನಾಸಾಬ ಮುಲ್ಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net