ಈಶಾ ಫೌಂಡೇಶನ್‌ನಿಂದ ರುದ್ರಾಕ್ಷಿ ವಿತರಣೆ

19
Published on

ಮಧೂರು: ಮನಸ್ಸು- ಬುದ್ಧಿಗಳ ಧನಾತ್ಮಕ ಶಕ್ತಿ ಚೈತನ್ಯ ಪುಟಿದೇಳಲು, ಆಂತರಂಗಿಕವಾದ ಧೀಶಕ್ತಿಯ ಪ್ರಾಪ್ತಿಗೆ ರುದ್ರಾಕ್ಷ ಧಾರಣೆ ದಿವ್ಯೌಷಧವಾಗಿದ್ದು, ಮನೆ-ಮನೆಗಳಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಈಶಾ ಫೌಂಡೇಶನ್ ಜಗತ್ತಿನಾದ್ಯಂತ ಮುನ್ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದು ಮಧೂರು ಶ್ರೀ ಮದನಂತೇಶ್ವರ ಶ್ರೀ ಸಿದ್ಧಿವಿನಾಯಕ ದೇವಾಲಯ ಆಡಳಿತಾಧಿಕಾರಿ ಕೆ.ಜಗದೀಶ ಪ್ರಸಾದ್ ಕೂಡ್ಲು ಹೇಳಿದರು.

ಕಾಸರಗೋಡು ವಲಯ ಈಶಾ ಫೌಂಡೇಶನ್ ನೇತೃತ್ವದಲ್ಲಿ ಈಶಾ ಫೌಂಡೇಶನ್ ಕೊಯಮತ್ತೂರಿನಲ್ಲಿ ಪೂಜಿಸಲ್ಪಟ್ಟ ರುದ್ರಾಕ್ಷಿಗಳನ್ನು ಉಚಿತವಾಗಿ ವಿತರಿಸುವ ಸಮಾರಂಭವನ್ನು ಭಾನುವಾರ ಶ್ರೀಕ್ಷೇತ್ರ ಮಧೂರಲ್ಲಿ ಉದ್ಘಾಟಿಸಿ ಮಾತನಾಡಿದರು.

ಈಶಾ ಫೌಂಡೇಶನ್ ಕಾಸರಗೋಡು ವಲಯ ಸಂಚಾಲಕ ಪಜ್ಜ ತಿರುಮಲೇಶ್ವರ ಭಟ್ ಅವರು ಸುಪ್ರೀಂ ಕೋರ್ಟಿನ ಹಿರಿಯ ವಕೀಲ ವಿ.ಎನ್.ರಘುಪತಿ ಅವರಿಗೆ ರುದ್ರಾಕ್ಷಿ ವಿತರಿಸಿ ಚಾಲನೆ ನೀಡಿದರು. ಶ್ಯಾಮ ಮಧ್ಯಸ್ಥ, ಸುಬ್ರಹ್ಮಣ್ಯ ಭಟ್, ಫೌಂಡೇಶನ್ ಕಾರ್ಯಕರ್ತರಾದ ಜಿತಿನ್, ದೀಕ್ಷಾ, ಪ್ರಕಾಶ ಅಡೂರು, ಅಜಿತ್ ಕಾಂಞಂಗಾಡು, ರಮ್ಯಾ ಮಾಧವನ್, ಬಾಲನ್, ರಾಮಚಂದ್ರ ಭಟ್, ಪ್ರಕಾಶ ಚೆರ್ವತ್ತೂರು, ಹರಿನಾರಾಯಣ್, ರಾಧಿಕಾ, ರಾಜೇಂದ್ರನ್, ಪ್ರಾರ್ಥನಾ ರಾಮಚಂದ್ರ ಭಟ್ ಮೊದಲಾದವರು ಇದ್ದರು. ಸಾವಿರಕ್ಕೂ ಹೆಚ್ಚು ಭಕ್ತರಿಗೆ ರುದ್ರಾಕ್ಷ ದೀಕ್ಷೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net