13ರಿಂದ ರುದ್ರಗಿರಿ ದೇವಸ್ಥಾನ ಜಾತ್ರೆ

Published on

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮದ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಪ್ರತಿಷ್ಠಾಪನಾ ದಿನ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಮಾ.13 ಮತ್ತು 14ರಂದು ನಡೆಯಲಿದೆ.

ಈ ಬಾರಿ ಉಡುಪಿಯ ಶೀರೂರು ವಾಮನತೀರ್ಥ ಸಂಸ್ಥಾನದ ಭಾವಿ ಪರ್ಯಾಯ ಪೀಠಾಧಿಪತಿ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಗಮಿಸಿ ದಿವ್ಯ ಆಶೀರ್ವಚನ ನೀಡಲಿದ್ದಾರೆ.

13ರಂದು ಗಣಹೋಮ, ವಿವಿಧ ಧಾರ್ಮಿಕ ವಿಧಿವಿಧಾನಗಳು, ಕಲಶಾಭಿಷೇಕ, ನಾಗದೇವರಿಗೆ ಅಶ್ಲೇಷಾ ಬಲಿ, ದೈವಗಳಿಗೆ ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5ಕ್ಕೆ ಶ್ರೀ ಸ್ವಾಮಿಗಳು ಪುರಪ್ರವೇಶಿಸಲಿದ್ದಾರೆ. ಅವರನ್ನು ಪೂರ್ಣಕುಂಭದ ಮೂಲಕ ಬರಮಾಡಿಕೊಂಡು ಯಥೋಚಿತ ಗೌರವ ನೀಡಲಾಗುವುದು. ಬಳಿಕ ಶ್ರೀಗಳಿಂದ ಮಂಗಳ ಆಶೀರ್ವಚನ ಹಾಗೂ ಮಂತ್ರಾಕ್ಷತೆ ನಡೆಯಲಿದೆ. ರಾತ್ರಿ ದುರ್ಗಾ ಪೂಜೆ, ರಂಗ ಪೂಜೆ, ದೇವರ ಬಲಿ ಹೊರಟು ಧಾರ್ಮಿಕ ಕಾರ್ಯಗಳು, ಸಂಜೆ 7ಕ್ಕೆ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಕಾರ್ಯಕ್ರಮ ನಡೆಯಲಿದೆ.

14ರಂದು ಬೆಳಗ್ಗೆ 7.30ರಿಂದಲೇ ಗಣಪತಿ ಹೋಮ, ದೇವರ ಬಲಿ ಹೊರಟು ಉತ್ಸವ ನಡೆಯಲಿದೆ. 11ಕ್ಕೆ ದೇವರ ದರ್ಶನಬಲಿ ಹಾಗೂ ಬಟ್ಟಲು ಕಾಣಿಕೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ ಪ್ರಸಾದ ವಿತರಣೆ ನಡೆದು ಮಹಾಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ನೇಮೋತ್ಸವ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net