ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ರುದ್ರಭೂಮಿ ಸ್ವಚ್ಛತೆ

Rudrabhoomi Swachha by Hindu organization workers
ಮಹಾಲಿಂಗಪುರದ ಹಿಂದೂ ರುದ್ರಭೂಮಿಯನ್ನು ಹಿಂದೂ ಸಂಘಟನೆಗಳ ಯುವಕರು ಸ್ವಚ್ಛಗೊಳಿಸಿದರು.ರವಿ ಜವಳಗಿ,ಅಭೀಷೇಕ ಲಮಾಣಿ,ರಾಘು ಪವಾರ ಇದ್ದರು.
Published on

ಮಹಾಲಿಂಗಪುರ: ಶನಿವಾರ ಮುಂಜಾನೆ ಹಿಂದೂ ಸಂಘಟನೆಗಳ ಯುವಕರು ಸುಮಾರು 3 ಗಂಟೆಗಳ ಕಾಲ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಸಂಘಟನೆಗಳ ಮುಖಂಡ ರವಿ ಜವಳಗಿ ಹಿಂದೂ ರುದ್ರಭೂಮಿಯು ಸುತ್ತಮುತ್ತಲಿನ ಸಾರ್ವಜನಿಕರು ಬಯಲು ಶೌಚಕ್ಕಾಗಿ ಬಳಸುತ್ತಿರುವದರಿಂದ ಇಲ್ಲಿ ಸ್ವಚ್ಛತೆಯು ಮರೀಚಿಕೆಯಾಗಿದೆ.

ಇಲ್ಲಿನ ಅವ್ಯವಸ್ಥೆಯನ್ನು ನೋಡಿ, ಅಂತ್ಯಸಂಸ್ಕಾರಕ್ಕೆ ಬಂದವರಿಗೆ ಇರಿಸುಮುರಿಸು ಆಗುತ್ತಿದೆ.ಕಾರಣ ರುದ್ರಭೂಮಿ ಸ್ವಚ್ಛತೆಗೆ ಪುರಸಭೆ ಹಾಗೂ ಊರಿನ ಹಿರಿಯರು ಆದ್ಯತೆ ನೀಡಬೇಕು ಎಂದರು.

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ.ಮೂಗಳಖೋಡ ಸ್ಮಶಾನಕ್ಕೆ ಭೇಟಿ ನೀಡಿ ಪುರಸಭೆಯ ಸಿಬ್ಬಂದಿಯಿಂದ ಅಲ್ಲಿನ ಚರಂಡಿ ಸ್ವಚ್ಛತೆ ಮಾಡಿಸಿದರು.

ಹಿಂದೂ ಸಂಘಟನೆಗಳ ಕಾರ್ಯಕರ್ತರಾದ ಅಭಿಷೇಕ ಲಮಾಣಿ, ಶಿವಾನಂದ ಕಲ್ಮಡಿ, ಹಣಮಂತ ನಾವ್ಹಿ, ಆನಂದ ಬಂಡಿಗಣಿ, ರಾಘು ಪವಾರ, ದಾನೇಶ ಡೊಂಬರ, ಸಂತೋಷ ಹಜಾರೆ,ಚನ್ನು ಆರೇಗಾರ, ಬಸವರಾಜ ಮುರಾರಿ, ಶಿವಾನಂದ ಹುಣಶ್ಯಾಳ, ಜಿ.ಎಸ್.ಗೊಂಬಿ, ಚಂದ್ರಶೇಖರ ಮೋರೆ, ರಾಘು ಶಿರೋಳ, ವಿಶಾಲ ಪತ್ತಾರ, ಮಹಾಲಿಂಗ ಅವಟಗಿ, ಅನೀಲ ಖವಾಸಿ ಸೇರಿದಂತೆ ಹಲವರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net