ಚಳ್ಳಕೆರೆ: ಶ್ರಾವಣ ಮಾಸದ ಅಂಗವಾಗಿ ಆ.17ರಿಂದ ಸೆ.14ರವರೆಗೆ ನಗರದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ರುದ್ರಾಭಿಷೇಕ ನಡೆಯಲಿದೆ.
ಶ್ರಾವಣ ಮಾಸದ ನಾಲ್ಕು ಸೋಮವಾರಗಳಲ್ಲಿ ರುದ್ರಾಭಿಷೇಕ, ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನ ಸಮಿತಿ ಧರ್ಮದರ್ಶಿ ಗೌಡ್ರು ಪಿ.ಜಿ.ರಾಮಣ್ಣ ತಿಳಿಸಿದ್ದಾರೆ.