

ಆಯನೂರು: ಬಸವಣ್ಣ ದೇವಸ್ಥಾನದಲ್ಲಿ ದೇವರಿಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಂಜುನಾಥ್ ಶಾಸ್ತ್ರಿಗಳು ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಸಮಿತಿಯ ಎ.ಜಿ.ನಾಗರಾಜ್, ಎ.ಎಚ್. ಚೂಡೇಶ್, ಎಂ.ಬಿ.ಷಣ್ಮುಖ, ಜೆ.ಎಸ್.ರಾಜಶೇಖರ್, ಟಿ.ಎಸ್.ದಾನೇಶ್, ಎ.ಬಸವರಾಜ್, ಸುಜಾತಾ, ಪ್ರಭಾವತಿ, ಆಶಾ ಹಲವರಿದ್ದರು. ಶ್ರಾವಣ ಮಾಸದ ಅಂಗವಾಗಿ ಪ್ರತಿ ಶ್ರಾವಣ ಸೋಮವಾರದಂದು ದೇವರಿಗೆ ರುದ್ರಾಭಿಷೇಕ ಏರ್ಪಡಿಸಲಾಗಿದೆ.