ಅತಿಮಹಾರುದ್ರ ಯಾಗ ಚಪ್ಪರ ಮುಹೂರ್ತ

15
Published on

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವಳ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಚಪ್ಪರ ಮುಹೂರ್ತ ಸೋಮವಾರ ನೆರವೇರಿತು.

ಯಾಗ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ರಘುನಾಥ ಸೋಮಯಾಜಿ, ಪದ್ಮನಾಭ ರೈ, ಕೃಷ್ಣಪ್ಪ ಪೂಜಾರಿ ದೋಟ, ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಹಾಜರಿದ್ದರು. ಕಲ್ಲಡ್ಕ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಮೇ 2, 3, 4ರಂದು ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net