

ಶಿರಸಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಅಡಕೆಗೆ ಕೊಳೆ ರೋಗ ತಗುಲಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಪಾರಾಗಲು ಲೋಕ ಕಲ್ಯಾಣಾರ್ಥ ಪ್ರತಿ ಗ್ರಾಮದಲ್ಲೂ ಧಾರ್ವಿುಕ ರುದ್ರ ಹೋಮ ಹಮ್ಮಿಕೊಳ್ಳಬೇಕು ಎಂಬ ಶ್ರೀ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಸೂಚನೆ ಮೇರೆಗೆ ಕೊಳಗಿಬೀಸ್ ಶ್ರೀ ಮಾರುತಿ ದೇವಸ್ಥಾನದಲ್ಲಿ ಶನಿವಾರ ರುದ್ರ ಹೋಮ ನಡೆಸಲಾಯಿತು.
ಪ್ರಧಾನ ಅರ್ಚಕ ವೇ.ಬ್ರ. ಕುಮಾರ ಭಟ್ಟ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮತ್ತಿಗಾರ, ನೇರ್ಲವಳ್ಳಿ ಭಾಗದ ಗ್ರಾಮಸ್ಥರು ಪಾಲ್ಗೊಂಡಿದ್ದರು.