ರಡ್ಡಿಗಳು ಉಪಪಂಗಡ ನಮೂದಿಸಬೇಡಿ

9RAM2
Published on

ರಾಮದುರ್ಗ: ರಡ್ಡಿ ನಮ್ಮ ಸಮುದಾಯದ ಅಭಿವದ್ಧಿಗೆ ಸರ್ಕಾರ ನಿಗಮ ಸ್ಥಾಪನೆ ಮಾಡಿ, ಪ್ರಗತಿಗೆ ಸಹಕಾರ ನೀಡಬೇಕು ಎಂದು ರಡ್ಡಿ ಜನಸಂದ ರಾಜ್ಯಾಧ್ಯ ಪ್ರಭಾಕರ ರಡ್ಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಾಂತರಾಜ ಆಯೋಗ ರಡ್ಡಿ ಸಮುದಾಯದ ಆರ್ಥಿಕ ಹಾಗೂ ಅಂಕಿ&ಸಂಖ್ಯೆಗಳ ಕುರಿತು ನಿಖರ ಮಾಹಿತಿ ಸರ್ಕಾರಕ್ಕೆ ಸಲ್ಲಿಸಿಲ್ಲ. 35&40 ಲ ಜನಸಂಖ್ಯೆಯ ನಮ್ಮನ್ನು 7 ಲಕ್ಕೆ ಸೀಮಿತಗೊಳಿಸಿದ್ದು, ಸರ್ಕಾರ ನೆಜ ಸಮೀೆ ನಡೆಸಬೇಕು. ಜತೆಗೆ ಜಾತಿ ಜನಗಣತಿ ಸಮೀೆಯ ಜಾತಿ 1105 ಕಾಲಂನಲ್ಲಿ ಕ್ರಮವಾಗಿ ರಡ್ಡಿ ಹಾಗೂ ಹಿಂದು ಎಂದು ಬರೆಯಿಸಬೇಕು. ಯಾವುದೇ ಕಾರಣಕ್ಕೂ ಉಪ ಪಂಗಡಗಳ ಹೆಸರು ಬರೆಯಿಸಬಾರದು ಎಂದು ಮನವಿ ಮಾಡಿದರು.

ರಡ್ಡಿ ಜನಸಂ ಶತಮಾನೋತ್ಸವಕ್ಕೆ ಸೆ. 24ರಂದು ಮುಖ್ಯಮಂತ್ರಿಗಳು ಒಳಗೊಂಡಂತೆ ಬೆಂಗಳೂರಿನ ಅರಮನೆ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಮುದಾಯದವರು ಆಗಮಿಸಿ ಯಶಸ್ಸಿಗೆ ಸಹಕರಿಸಬೇಕು ಎಂದರು. ರಡ್ಡಿ ಸಮುದಾಯದ ತಾಲೂಕು ಅಧ್ಯ ಜ್ಞಾನೇಶ್ವರ ಮೇಲಪ್ಪಗೋಳ, ಶಾಂತರಾಜು, ಕಲ್ಲಣ್ಣ ವಜ್ರಮಟ್ಟಿ, ರಾಜಶೇಖರ ತೋಳಗಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net