

ಕಡಬ: ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕ ಶೆಡ್ನಲ್ಲಿಯೇ ಮೃತಪಟ್ಟಿರುವ ಘಟನೆ ಕಡಬ ಸಮೀಪದ ಕುಂತೂರು ಗ್ರಾಮದಲ್ಲಿ ನಡೆದಿದೆ.
ಕೋಡಿಂಬಾಳ ಗ್ರಾಮದ ಕಡಬ ನಿವಾಸಿ ಶರತ್(29) ಮೃತ ಯುವಕ. ಕಳೆದ ತಿಂಗಳಿನಿಂದ ಕುಂತೂರು ಗ್ರಾಮದ ಉದಯಶಂಕರ್ ಭಟ್ ಎಂಬುವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಮೇ 17ರಂದು ಸಂಜೆ ಶೆಡ್ನಲ್ಲಿ ಮೃತಪಟ್ಟಿರುವುದಾಗಿ ಮನೆ ಮಾಲೀಕ ಉದಯಶಂಕರ್ ಭಟ್ ತಿಳಿಸಿದ್ದರು. ಮೃತರ ಬಾವ ಕೃಷ್ಣ ಕುಮಾರ್ ಸ್ಥಳಕ್ಕೆ ಬಂದು ನೋಡಿ ದೂರು ನೀಡಿದ್ದಾರೆ. ಕುಡಿತದ ಅಭ್ಯಾಸ ಹೊಂದಿದ್ದು ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.