

ಆನೇಕಲ್ : ತೆರಿಗೆ ವಂಚಿಸಿ ಸಂಚರಿಸುತ್ತಿದ್ದ ಸುಮಾರಿ 25 ಖಾಸಗಿ ಬಸ್ಗಳನ್ನು ಶುಕ್ರವಾರ ಬೆಳಂಬೆಳಗ್ಗೆ ವಶಪಡಿಸಿಕೊಂಡಿರುವ ಸಾರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು, 44 ಲ ರೂ. ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಹೊಸೂರು&ಬೆಂಗಳೂರು ಮುಖ್ಯ ರಸ್ತೆಯ ರಾಜ್ಯದ ಗಡಿ ಅತ್ತಿಬೆಲೆಯಲ್ಲಿ ಸಾರಿಗೆ ಇಲಾಖೆ ಜಂಟಿ ಆಯುಕ್ತರಾದ ಶೋಭಾ ಹಾಗೂ ಗಾಯತ್ರಿ ನೇ.ಸಾಯಿ ಪ್ರಸಾದ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ತಮಿಳುನಾಡು ಹಾಗೂ ನಾಗಾಲ್ಯಾಂಡ್ ಆರ್ಟಿಒದಲ್ಲಿ ನೋಂದಣಿಯಾಗಿದ್ದ ಬಸ್ಗಳನ್ನು ವಶಕ್ಕೆ ಪಡೆದು, ಅತ್ತಿಬೆಲೆ ಆರ್ಟಿಒ ಕಚೇರಿಗೆ ತಂದು ನಿಲ್ಲಿಸಿದರು.
ತಮಿಳುನಾಡು ಮಾರ್ಗವಾಗಿ ರಾಜ್ಯಕ್ಕೆ ಬರುತ್ತಿದ್ದ ಬಸ್ಗಳ ಪರಿಶೀಲನೆ ವೇಳೆ ಕರ್ನಾಟಕಕ್ಕೆ ತೆರಿಗೆ ವಂಚಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬಸ್ಗಳನ್ನು ವಶಕ್ಕೆ ಪಡೆಯಲಾಯಿತು. ಕೆಲವು ಮಾಲೀಕರು ತೆರಿಗೆ ಕಟ್ಟಿ ಬಸ್ಗಳನ್ನು ವಾಪಸ್ ಪಡೆದರು. ಅಪರ ಸಾರಿಗೆ ಆಯುಕ್ತೆ ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೃಷ್ಣಾನಂದ, ಸಿಪಿಐ ಪುಟ್ಟಸ್ವಾಮಿ, ರಂಜಿತ್, ಸುಧಾಕರ್, ಅಸಾದುಲ್ಲ ಬೇಗ್ ಸೇರಿ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳನ್ನು ಪರ್ಯಾಯವಾಗಿ ವ್ಯವಸ್ಥೆ ಮಾಡಲಾಗಿತ್ತು.