

ಪುತ್ತೂರು: ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಯಾತ್ರಿಕರನ್ನು ಸುಲಿಗೆ ಮಾಡುತ್ತಿರುವ ರಿಕ್ಷಾ ಚಾಲಕರನ್ನು ಬುಧವಾರ ಪುತ್ತೂರು ಆರ್‌ಟಿಒ ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ.
ರೈಲ್ವೆ ನಿಲ್ದಾಣದಿಂದ ರಿಕ್ಷಾ ಚಾಲಕರು ಎರಡು, ಮೂರು ಪಟ್ಟು ಅಧಿಕ ಹಣ ಕೀಳುತ್ತಿರುವ ಬಗ್ಗೆ ವಿಜಯವಾಣಿ ವರದಿ ಮಾಡಿತ್ತು. ಸುಲಿಗೆ ಬಗ್ಗೆ ಸಾರ್ವಜನಿಕರು ಈ ಬಗ್ಗೆ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಿಕ್ಷಾ ಚಾಲಕರನ್ನು ಕರೆಸಲಾಗಿತ್ತು. ೨೫ಕ್ಕೂ ಅಽಕ ರಿಕ್ಷಾ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು. ಕಚೇರಿಯಲ್ಲಿ ಬಾಗಿಲು ಹಾಕಿ ಬೇರೆಯವರನ್ನು ಒಳಗೆ ಬಿಡದೆ ಸಭೆ ನಡೆಸಿದ್ದು ಅನುಮಾನಗಳಿಗೆ ಕಾರಣವಾಗಿದೆ.
ಪ್ರಾದೇಶಿಕ ಸಾರಿಗೆ ಅಽಕಾರಿ ವಿಶ್ವನಾಥ ಅಜಿಲ ಮಾತನಾಡಿ, ಜಿಲ್ಲೆಯಲ್ಲಿ ಸಂಚರಿಸುವ ಆಟೋರಿಕ್ಷಾಗಳಿಗೆ ೨೦೨೨ರ ಡಿಸೆಂಬರ್‌ನಲ್ಲಿ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಪ್ರಕಾರ ೧.೫ ಕಿ.ಮೀ.ಗೆ ೩ ಮಂದಿಗೆ ೩೫ ರೂ. ವಿಽಸಬಹುದಾಗಿದ್ದು, ಬಳಿಕ ಪ್ರತಿ ಕಿ.ಮೀ.ಗೆ ೨೦ ರೂ.ಪಡೆಯಬಹುದಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ರವರೆಗೆ ಮಾತ್ರ ಒಂದೂವರೆ ಪಟ್ಟು ದರ ಪಡೆಯಲು ಅವಕಾಶವಿದೆ. ಇದರ ಪಾಲನೆಯನ್ನು ಸರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗೆ ಒಂದೇ ನೊಂದಣಿ ಇದ್ದು, ಬೆಳ್ತಂಗಡಿ, ಸುಳ್ಯ ಭಾಗದ ರಿಕ್ಷಾಗಳು ಪುತ್ತೂರಿಗೆ ಆಗಮಿಸಿ ಸರದಿಯಲ್ಲಿ ನಿಂತು ಬಾಡಿಕೆ ಮಾಡುತ್ತಿರುವುದರಿಂದ ಸ್ಥಳೀಯ ರಿಕ್ಷಾ ಚಾಲಕರಿಗೆ ಅನ್ಯಾಯವಾಗುತ್ತಿದೆ. ಪುತ್ತೂರಿನಲ್ಲಿ ಸರ್ವೀಸ್ ಮಾಡುವ ರಿಕ್ಷಾಗಳಲ್ಲಿ ಸರಿಯಾದ ದಾಖಲೆಗಳಿಲ್ಲ. ಸಮವಸ ಸರಿಯಾಗಿ ಹಾಕುತ್ತಿಲ್ಲ. ಈ ನಿಟ್ಟಿನಲ್ಲಿ ಆರ್‌ಟಿಒ ಅಧಿಕಾರಿಗಳು ಪ್ರತಿ ವಾರ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿ ತಪಾಸಣೆ ನಡೆಸಬೇಕೆಂಬ ಆಗ್ರಹ ಕೇಳಿ ಬಂದಿದೆ.