ಸರ್ಕಾರದ ಫಲಕಗಳ ದುರ್ಬಳಕೆ

rto
Published on

ಮಡಿಕೇರಿ:

ಖಾಸಗಿ ವಾಹನಗಳ ಮೇಲೆ ಸರ್ಕಾರಿ ನಾಮಫಲಕಗಳು, ಸಂಘ-ಸAಸ್ಥೆಗಳ ಹೆಸರುಗಳು, ಅನಧಿಕೃತವಾಗಿ ಪೊಲೀಸ್, ಪ್ರೆಸ್ ಸೇರಿದಂತೆ ವಿವಿಧ ಬಗೆಯ ಸ್ಟಿಕರ್‌ಗಳನ್ನು ಅಳವಡಿಸಿಕೊಂಡು ತಿರುಗಾಡುವ ಪರಿಪಾಟ ಈಚೆಗೆ ಹೆಚ್ಚಾಗುತ್ತಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದ್ದು, ಹಲವು ರೀತಿಯ ಗಂಭೀರ ದುರುಪಯೋಗಳಿಗೆ ಕಾರಣವಾಗುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ದೇಶದಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ಅಧಿಕೃತ ನೋಂದಣಿ ಸಂಖ್ಯೆ ಕೊಟ್ಟು ಈ ಮೂಲಕ ವಾಹನಗಳನ್ನು ಕಾನೂನು ಪ್ರಕಾರವಾಗಿ ಗುರುತಿಸಲಾಗುತ್ತದೆ.

ಈ ನೋಂದಣಿ ಸಂಖ್ಯೆ ಒಳಗೊಂಡ ನಾಮಫಲಕ ಅಳವಡಿಕೆಗೂ ನಿಯಮಗಳಿದ್ದು ಅಕ್ಷರ-ಅಂಕಿಗಳು ಮತ್ತು ನಾಮಫಲಕ ನಿಗದಿಪಡಿಸಿದ ಗಾತ್ರ, ಅಳತೆ, ವಿನ್ಯಾಸ, ಬಣ್ಣಗಳಲ್ಲೇ ಅಳವಡಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಅಲ್ಲಿ ಬೇರೆ ಏನನ್ನೂ ಬರೆಯಬಾರದು ಎನ್ನುವ ನಿಯಮ ಇದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಿ ಇಲಾಖೆಗಳಿಗೆ ಸೇರಿದ ವಾಹನಗಳು ತಮ್ಮದೇ ಆದ ನೋಂದಣಿ ನಿಯಮಗಳನ್ನು ಹೊಂದಿದ್ದು, ಅವುಗಳಿಗೆ ಮಾತ್ರ ಆಯಾ ಸರ್ಕಾರದ ಲಾಂಛನ, 'ಭಾರತ ಸರ್ಕಾರ', ಕರ್ನಾಟಕ ಸರ್ಕಾರ ಅಥವಾ 'ಸರ್ಕಾರ' ಎಂಬ ಪದಗಳನ್ನು ಬಳಸಲು ಅನುಮತಿ ಇರುತ್ತದೆ. ಆದರೆ ಸರ್ಕಾರಿ ನೌಕರರು ತಮ್ಮ ಖಾಸಗಿ ಅಥವಾ ವೈಯಕ್ತಿಕ ವಾಹನಗಳ ಮೇಲೆ ಅವರ ಇಲಾಖೆ ಅಥವಾ ಸರ್ಕಾರ ಎಂದು ನಮೂದಿಸಲು ಅನುಮತಿ ಇಲ್ಲ.

ನಿಯಮಗಳ ಪ್ರಕಾರ ನೋಂದಣಿ ಫಲಕದ ಮೇಲೆ ನೋಂದಣಿ ಸಂಖ್ಯೆ ಹೊರತುಪಡಿಸಿ, ಅಶೋಕ ಚಕ್ರ, ಪೊಲೀಸ್, ಸೇನೆ, ನ್ಯಾಯಾಂಗದ ಲಾಂಛನ, ಅಥವಾ ಯಾವುದೇ ಇಲಾಖೆಯ ಹೆಸರನ್ನು ಅನಧಿಕೃತವಾಗಿ ಬಳಸುವುದು ಸೇರಿದಂತೆ ಯಾವುದೇ ಚಿಹ್ನೆ, ಲೋಗೋ, ಘೋಷಣೆ, ಕಸ್ಟಮ್ ಫಾಂಟ್‌ಗಳು ಅಥವಾ ಅಲಂಕಾರಿಕ ವಿನ್ಯಾಸಗಳನ್ನು ಅಳವಡಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಆದರೆ ಪ್ರಾದೇಶಿಕ ಸಾರಿಗೆ ಇಲಾಖೆ ನಿಯಮಗಳು ಕೇವಲ ಪುಸ್ತಕಗಳಿಗೆ ಸೀಮಿತ ಎನ್ನುವಂತಾಗಿದೆ. ವಾಹನಗಳ ನಂಬರ್ ಪ್ಲೇಟ್ ಮೇಲೆ ಅನಧಿಕೃತ ಬರಹಗಳು ಕೆಲವರು ಶೋಕಿ ಎಂದು ಪರಿಗಣಿಸಿದಂತಿದೆ. ಇದರ ಜತೆಗೆ ಅನೇಕ ಖಾಸಗಿ ವಾಹನಗಳಲ್ಲಿ ಅನಧಿಕೃತವಾಗಿ ಸರ್ಕಾರಿ ಲಾಂಛನಗಳು, ಚಿಹ್ನೆಗಳು, ಹೆಸರುಗಳು, ಸರ್ಕಾರಿ ಕಚೇರಿಗಳನ್ನು ಸೂಚಿಸುವ ಪದಗಳನ್ನು ವಾಹನಗಳ ನಂಬರ್ ಪ್ಲೇಟ್ ಮೇಲೆ ಹಾಕಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.

ವಾಹನಗಳ ಇತರ ಭಾಗಗಳ ಮೇಲೂ ಕರ್ನಾಟಕ ಸರ್ಕಾರ, ಕರ್ನಾಟಕ ಸರ್ಕಾರದ ಸೇವೆಯಲ್ಲಿ...ಭಾರತ ಸರ್ಕಾರ, ಭಾರತ ಸರ್ಕಾರದ ಸೇವೆಯಲ್ಲಿ.. ಇಂಥ ಫಲಕಗಳನ್ನೂ ಖಾಸಗಿ ವಾಹನಗಳಲ್ಲಿ ಕಾಣಬಹುದಾಗಿದೆ. ಆದರೆ ಖಾಸಗಿ ವಾಹನಗಳ ಮೇಲೆ ಸರ್ಕಾರಿ ಲಾಂಛನ ಅಥವಾ ಚಿಹ್ನೆ ಸೇರಿದಂತೆ ಇಂಥ ಬರಹಗಳ ಬಳಕೆ ಬಗ್ಗೆ ದೇಶದಲ್ಲಿ ಕಠಿಣ ನಿಯಮಗಳಿವೆ. ಆದರೆ ಯಾವುದು ಕೂಡ ಗಂಭೀರವಾಗಿ ಪಾಲನೆ ಆಗುತ್ತಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಇಲಾಖೆಗಳ ಸ್ವಂತ ವಾಹನದ ಅಭಾವ ಇರುವುದರಿಂದ ಮಾಸಿಕ ಆಧಾರ ಅಥವಾ ಹೊರಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಪಡೆದುಕೊಳ್ಳಲಾಗುತ್ತಿದೆ. ಸರ್ಕಾರಿ ವಾಹನ ಹೊರತುಪಡಿಸಿ ಬೇರೆ ವಾಹನಗಳಲ್ಲಿ ಸರ್ಕಾರದ ಲಾಂಛನ, ಹೆಸರು ಬಳಸುವುದು ಕಾನೂನಿಗೆ ವಿರುದ್ಧವಾಗಿದೆ. ಆದರೆ ಹೊರಗುತ್ತಿಗೆ ಆಧಾರದಲ್ಲಿ ಬಳಕೆ ಆಗುತ್ತಿರುವ ಖಾಸಗಿ ವಾಹನಗಳಲ್ಲಿ ಎಲ್ಲಾ ನಿಯಮಗಳನ್ನು ಮೀರಿ ಸರ್ಕಾರದ ಲಾಂಛನ ಮತ್ತು ಹೆಸರು ಬಳಕೆ ಮಾಡುವುದು ಸಾಮಾನ್ಯವಾಗಿದೆ.

ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು, ಮಂಡಳಿಗಳು, ಸರ್ಕಾರೇತರ ಸಂಘ ಸಂಸ್ಥೆಗಳಲ್ಲಿ ಉಪಯೋಗಿಸುವ ಯಾವುದೇ ಖಾಸಗಿ ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರು, ಚಿಹ್ನೆ ಹಾಗೂ ಲಾಂಛನಗಳನ್ನು ವಾಹನಗಳ ನೋಂದಣಿ ಫಲಕಗಳ ಮೇಲೆ

ಅನಧಿಕೃತವಾಗಿ ಅಳವಡಿಸಿಕೊಳ್ಳುವುದು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಉಲ್ಲಂಘನೆ ಆಗುತ್ತದೆ. ಹಾಗಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಅಧೀನ ಕಚೇರಿಗಳಲ್ಲಿ ಉಪಯೋಗಿಸುವ ಖಾಸಗಿ ವಾಹನಗಳಲ್ಲಿ ಕರ್ನಾಟಕ ಸರ್ಕಾರದ ಹೆಸರು, ಲಾಂಛನ, ಹಾಗೂ ಸಂಸ್ಥೆಯ ಹೆಸರು, ಚಿಹ್ನೆ, ಬರಹಗಳನ್ನು ಬಳಸಲು ಅವಕಾಶವಿರುವುದಿಲ್ಲ. ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದ್ದರೂ ನಿಯಮಗಳ ಉಲ್ಲಂಘನೆ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಅಧಿಕಾರಿಗಳು ಉತ್ಸಾಹ ತೋರಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರುಗಳನ್ನು ಹೋಲುವ ರೀತಿಯಲ್ಲಿ ರಾಷ್ಟಿçÃಯ ಅಥವಾ ರಾಜ್ಯ ಮಾನವ ಹಕ್ಕುಗಳ ಒಕ್ಕೂಟ, ಸಂಸ್ಥೆ ಇತ್ಯಾದಿ ಹೆಸರು ಚಿಹ್ನೆ, ಲಾಂಛನ ಹಾಗೂ ಸಂಘ-ಸAಸ್ಥೆಗಳ ಹೆಸರು ಅಳವಡಿಸಿಕೊಂಡಿ ಓಡಾಡುವ ವಾಹನಗಳೂ ಅಲಲ್ಲಿ ಕಾಣಲು ಸಿಗುತ್ತದೆ. ಇಂಥ ನಾಮಫಲಕಗಳನ್ನು ತೆರವು ಮಾಡಲು ಈ ಹಿಂದೆ ಉಚ್ಛ ನ್ಯಾಯಾಲಯದಿಂದ ಆದೇಶವೂ ಹೊರಬಿದ್ದಿತ್ತು.

ಖಾಸಗಿ ವಾಹನಗಳಲ್ಲಿ ಸರ್ಕಾರಿ ಫಲಕ ಅಥವಾ ಲಾಂಛನಗಳನ್ನು ಬಳಸುವುದು ವಿವಿಧ ರೀತಿಯ ದುರುಪಯೋಗಗಳಿಗೆ ದಾರಿ ಮಾಡಿಕೊಡುತ್ತದೆ. ಕೆಲವು ವ್ಯಕ್ತಿಗಳು ತಾವು ಸರ್ಕಾರಿ ಅಧಿಕಾರಿಗಳೆಂದು ಬಿಂಬಿಸಿ, ಸಾರ್ವಜನಿಕರನ್ನು ವಂಚಿಸಲು ಅಥವಾ ಜನರಲ್ಲಿ ಭಯ ಹುಟ್ಟಿಸಲು ಈ ಫಲಕಗಳನ್ನು ಬಳಸಲಾಗುತ್ತದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದಾಗ ದಂಡದಿAದ ತಪ್ಪಿಸಿಕೊಳ್ಳಲು ಅಥವಾ ಟೋಲ್ ಗೇಟ್‌ಗಳಲ್ಲಿ ರಿಯಾಯಿತಿ ಪಡೆಯಲು ಸರ್ಕಾರಿ ಚಿಹ್ನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತದೆ.

ಅನಧಿಕೃತ ನೋಂದಣಿ ಫಲಕ ಅಳವಡಿಸಿಕೊಂಡಿರುವ ವಾಹನ ಸಾರ್ವಜನಿಕ ಸ್ಥಳದಲ್ಲಿ ಕಂಡುಬAದಲ್ಲಿ ಸಾರ್ವಜನಿಕರು ಅದರ ನೋಂದಣಿ ಫಲಕ, ಸ್ಥಳ ಸಮೇತ ಭಾವಚಿತ್ರವನ್ನು ತೆಗೆದುಕೊಂಡು 94498 63459 ವಾಟ್ಸಪ್ ಸಂಖ್ಯೆಗೆ ಕಳುಹಿಸಿದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನಿಯಮಾನುಸಾರ ಸಂಬAಧಿಸಿದ ನೋಂದಣಿ ಪ್ರಾಧಿಕಾರಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಪಾಸಣೆ ವೇಳೆ ಇಂತಹ ಪ್ರಕರಣಗಳು ಕಂಡುಬAದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲು ಮೋಟಾರು ವಾಹನ ನಿರೀಕ್ಷಕರುಗಳಿಗೆ ಸರ್ಕಾರ ಸೂಚನೆಗಳನ್ನು ನೀಡಿದೆ.

ಖಾಸಗಿ ವಾಹನಗಳಲ್ಲಿ ಕರ್ನಾಟಕ ಸರ್ಕಾರದ ಹೆಸರು, ಲಾಂಛನ, ಹಾಗೂ ಸಂಸ್ಥೆಯ ಹೆಸರು, ಚಿಹ್ನೆ, ಬರಹಗಳನ್ನು ಬಳಸುತ್ತಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಜಂಟಿ ಸಾರಿಗೆ ಆಯುಕ್ತರುಗಳಿಗೆ ಅವರ ವಿಭಾಗದ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಿ, ತಪಾಸಣೆ ಕೈಗೊಳ್ಳಲು ಸೂಚಿಸಲಾಗಿದೆ. ತಪ್ಪಿತಸ್ಥ ಪ್ರಕರಣಗಳಲ್ಲಿ ಮೋಟಾರು ವಾಹನ ಕಾಯ್ದೆ 1988ರ ಕಲಂ 200 ರಡಿ ಮೊದಲ ಅಪರಾಧಕ್ಕೆ 500 ರೂ. ಮತ್ತು 2ನೇ ಹಾಗೂ ಆನಂತರದ ಅಪರಾಧಕ್ಕೆ 1000 ರೂ. ದಂಡ ವಿಧಿಸಲಾಗುತ್ತಿದೆ.

ರಾಮಲಿಂಗಾ ರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net