ಆರ್‌ಟಿಐ ಕಾರ್ಯಕರ್ತರ ಅವಹೇಳನ ಸಲ್ಲ, ಸಿಎಂ ಕ್ಷಮೆಯಾಚನೆಗೆ ಪಟ್ಟು, ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ

8dbp protest
Published on

ದೊಡ್ಡಬಳ್ಳಾಪುರ: ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರ್‌ಟಿಐ ಕಾರ್ಯಕರ್ತರ ಬಗ್ಗೆ ಅವಹೇನಕಾರಿಯಾಗಿ ಮಾತನಾಡಿದ್ದಾರೆ. ಆದ್ದರಿಂದ, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಸೋಮವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು.

ವೇದಿಕೆ ಉಪಾಧ್ಯಕ್ಷ ಬಿ. ಶಿವಶಂಕರ್ ಮಾತನಾಡಿ, ಭ್ರಷ್ಟಾಚಾರ ಬಯಲಿಗೆಳೆಯುವಲ್ಲಿ ಆರ್‌ಟಿಐ ಪ್ರಮುಖ ಅಸವಾಗಿದೆ. ಇದನ್ನು ಬಳಸಿಕೊಂಡು ಆರ್‌ಟಿಐ ಕಾರ್ಯಕರ್ತರು ಹಲವು ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದಾರೆ. ಆದರೆ, ಯಡಿಯೂರಪ್ಪ ಅವರು ಆರ್‌ಟಿಐ ಕಾರ್ಯಕರ್ತರನ್ನು ‘ಹಾದಿಬೀದಿಯಲ್ಲಿ ಓಡಾಡುವ ಜನ ಕೇಸ್ ಹಾಕಿ ಕಿರುಕುಳ ಕೊಡುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ನೀಡುವ ಮುನ್ನ ಸ್ವಲ್ಪ ಆಲೋಚಿಸಿ ಮಾತನಾಡಬೇಕಿತ್ತು ಎಂದರು.

ಮಾಹಿತಿಹಕ್ಕು ಕಾಯ್ದೆಯಡಿ ಭ್ರಷ್ಟಾಚಾರವನ್ನು ಬಯಲು ಮಾಡಲು ರಾಜ್ಯಾದ್ಯಂತ ಆರ್‌ಟಿಐ ಕಾರ್ಯಕರ್ತರು ಹೋರಾಡುತ್ತಿದ್ದಾರೆ. ಸ್ವಂತ ಹಣದಿಂದ ಮಾಹಿತಿ ಪಡೆದು ನ್ಯಾಯಯುತ ಹೋರಾಟ ಮಾಡುವ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದರು.

ವೇದಿಕೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿದರು.ಕ್ಷಮೆಯಾಚಿಸದಿದ್ದರೆ ಸಿಎಂ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಶಿರಸ್ತೇದಾರ್ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net