ಆರ್‌ಟಿಸಿ ಸುಟ್ಟು ಮರವೇ ಪ್ರತಿಭಟನೆ

SRP_11-02jpj
ಶ್ರೀರಂಗಪಟ್ಟಣದ ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ಕುವೆಂಪು ವೃತ್ತದಲ್ಲಿ ಶನಿವಾರ ಜಮಾವಣೆಗೊಂಡ ಮಂಡ್ಯರಕ್ಷಣಾ ವೇದಿಕೆ ಕಾರ್ಯಕರ್ತರು ಆರ್‌ಟಿಸಿ ಸುಟ್ಟು ಹಾಕಿದರು. ಶಂಕರ್ ಬಾಬು, ಜಗದೀಶ್ ಗೌಡ, ಶ್ರೀಕಾಂತ್, ಬಾಳೆಹಣ್ಣು ಮಂಜುನಾಥ್ ಇತರರು ಇದ್ದರು.
Published on

ಶ್ರೀರಂಗಪಟ್ಟಣ : ತಾಲೂಕಿನ ರೈತರ ಕೃಷಿ ಜಮೀನುಗಳು, ಸರ್ಕಾರಿ ಶಾಲೆ, ದೇವಾಲಯಗಳು ಸೇರಿದಂತೆ ಪುರಾತನ ಸ್ಮಾರಕಗಳ ಆಸ್ತಿಗಳ ದಾಖಲೆಗಳಲ್ಲಿ ಉಲ್ಲೇಖವಾಗಿರುವ ವಕ್ಫ್ ಮಂಡಳಿ ಹೆಸರನ್ನು ತೆಗೆದುಹಾಕುವಂತೆ ಆಗ್ರಹಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಲ್ಲಿ ಜಮಾವಣೆಗೊಂಡ ವೇದಿಕೆ ಕಾರ್ಯಕರ್ತರು ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಉರುಳು ಸೇವೆ ಮೂಲಕ ಪ್ರತಿಭಟಿಸಿದ್ದು, ವಕ್ಫ್ ಮಂಡಳಿ ಉಲ್ಲೇಖವಿರುವ ಕೃಷಿಭೂಮಿಗಳ ಆರ್‌ಟಿಸಿಗಳನ್ನು ಸುಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರ, ವಕ್ಫ್ ಮಂಡಳಿ, ಸಚಿವ ಜಮೀರ್ ಅಹಮದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಂಡ್ಯ ರಕ್ಷಣಾ ವೇದಿಕೆಯ ಗೌರವ ಅಧ್ಯಕ್ಷ ಬಳ್ಳೇಕೆರೆ ಶ್ರೀಕಾಂತ್, ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಗೌಡ, ಬಾಳೆಹಣ್ಣು ಮಂಜುನಾಥ್, ಅಂಕಶೆಟ್ಟಿ, ಬೋರಪ್ಪ, ಹರೀಶ್,ಚಂದ್ರಶೇಖರ್, ಮದನ್ ರಾವ್, ಅಭಿಷೇಕ್, ಛಾಯದೇವಿ, ಮಂಗಳಮ್ಮ, ಸುಮಿತ್ರಮ್ಮ, ಗಾಯತ್ರಮ್ಮ ಇತರರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net