ಆರ್​ಎಸ್​ಎಸ್​ ಆಕರ್ಷಕ ಪಥಸಂಚಲನ

Untitled-7
ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಆರ್​ಎಸ್​ಎಸ್​ ಪಥಸಂಚಲನದಲ್ಲಿ ಶಾಸಕ ಧೀರಜ್​ ಮುನಿರಾಜು ಹೆಜ್ಜೆಹಾಕಿದರು.
Published on

ದೊಡ್ಡಬಳ್ಳಾಪುರ : ರಾಷ್ಟ್ರೀಯ ಸ್ವಯಂ ಸೇವಕ ಸಂ ಸ್ಥಾಪನೆಯ 100ನೇ ವರ್ಷಾಚರಣೆ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಿತು. ಸೋಮವಾರ ಸಂಜೆ 5 ಗಂಟೆಗೆ ನಗರದ ಬಯಲು ಬಸವಣ್ಣ ದೇವಾಲಯದ ಬಳಿ ಆರ್​ಎಸ್​ಎಸ್​ ಗೀತೆ ಹಾಡಿದ ನಂತರ ಆರಂಭವಾದ ವಿಜಯದಶಮಿ ಪಥಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಸವಣ್ಣದೇವಾಲಯದ ಬಳಿ ಅಂತ್ಯಗೊಂಡಿತು. ರಸ್ತೆಯ ಉದ್ದಕ್ಕೂ ಪಥಸಂಚಲನದ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿ ಸುರಿಸಿದರು. ವಿವಿಧ ಕಡೆಗಳಲ್ಲಿ ಮಹಿಳೆಯರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಗಣಧಾರಿಗಳಿಗೆ ಸ್ವಾಗತ ಕೋರಿದರು.

ಗಮನ ಸೆಳೆದ ಶಾಸಕ : ಶಾಸಕ ಧೀರಜ್​ ಮುನಿರಾಜು ಗಣ ವೇಷಧಾರಿಯಾಗಿ ಎಡ, ಬಲ, ಎಡ, ಬಲ ಎನ್ನುತ್ತಾ ಪಥಸಂಚಲನದಲ್ಲಿ ಪೂರ್ಣವಾಗಿ ಭಾಗಿಯಾಗಿ ಗಮನ ಸೆಳೆದರು. ಪಥಸಂಚಲನದಲ್ಲಿ ಸುಮಾರು 600 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net