ಸೇಡಂನಲ್ಲಿ ಪಥಸಂಚಲನಕ್ಕೆ ತಡೆ: ಸ್ವಯಂ ಸೇವಕರು ವಶಕ್ಕೆ

Capture
Published on

ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಭಾನುವಾರ ಸಂಜೆ 4ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂದ ಪಥ ಸಂಚನಲಕ್ಕೆ ನಿರ್ಧರಿಸಿ, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ತಹಸೀಲ್ದಾರ್​ 3.30ಕ್ಕೆ ನಿಷೇಧಾಜ್ಞೆ ಹೇರಿ, ಆದೇಶ ಹೊರಡಿಸಿದ್ದರು. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊನೇ ಕ್ಷಣದಲ್ಲಿ ರ್ನಿಬಂಧ ಹೇರಿದ್ದರೇ ಹೇಗೆ ಎಂದು ಪ್ರಶ್ನಿಸಿ, ಸ್ವಯಂ ಸೇವಕರು ಪಥ ಸಂಚಲನ ಆರಂಭಿಸಿದ್ದರು. ಸಂ ಸ್ಥಾನದಿಂದ ಸುಮಾರು 500 ಮೀಟರ್​ ಸಾಗಿದ ಪಥ ಸಂಚಲನಕ್ಕೆ ಮಾರ್ಗ ಮಧ್ಯೆ ತಡೆದ ಪೊಲೀಸರು ನೂರಾರು ಸ್ವಯಂ ಸೇವಕರನ್ನು ವಶಕ್ಕೆ ಪಡೆದರು. ಈ ಮಧ್ಯೆಯೂ ನೂರಾರು ಸ್ವಯಂ ಸೇವಕರು ಪಥ ಸಂಚಲನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಪ್ರತಿಬಂದಕಾಜ್ನೆ: ಯಡ್ರಾಮಿ ತಾಲೂಕಿನ ಕುಮ್ಮನಸಿರಸಗಿ ಗ್ರಾಮದಲ್ಲಿ ಅ.19ರಂದು ಆರ್​ಎಸ್​ಎಸ್​ ಪಥ ಸಂಚಲನ ನಿರ್ಧಾರವಾದ ಹಿನ್ನೆಲೆಯಲ್ಲಿ ಪ್ರತಿಭಂದಕಾಜ್ಞೆ ವಿಧಿಸಿ, ಯಡ್ರಾಮಿ ತಹಸೀಲ್ದಾರ್​ ಆದೇಶ ಹೊರಡಿಸಿದ್ದರಿಂದ ಪಥಸಂಚನಲ ನಡೆಯಲಿಲ್ಲ. ಪಥಸಂಚಲನ ನಡೆದರೆ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ನಿಷೇಧಿಸಲಾಗಿದೆ ಎಂದು ಆದೇಶಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net